ಕಬೀರ್ ಖಾನ್‌ಗೆ ಉಡುಗೊರೆ ನೀಡಿದ ಸಲ್ಮಾನ್ ಖಾನ್

ಮಂಗಳವಾರ, 1 ಸೆಪ್ಟಂಬರ್ 2015 (09:45 IST)
ತನ್ನ ಸಿನಿ ಜೀವನದಲ್ಲಿ ಮರೆಯಲಾರದ ಸಿನಿಮಾವೊಂದನ್ನು ನೀಡಿದ ನಿರ್ದೇಶಕ ಕಬೀರ್ ಖಾನ್ ಅವರಿಗೆ ಸಲ್ಮಾನ್ ಖಾನ್ ಮರೆಯಾಲರದ ಉಡುಗೊರೆ ನೀಡಿದ್ದಾರೆ. ತಾವೇ ಬರೆದಿರುವ ಅತ್ಯುತ್ತಮ  ಚಿತ್ರವೊಂದನ್ನು ಕೊಡುಗೆಯಾಗಿ ನೀಡಿದ್ದಾರೆ.
ಕಪ್ಪು ಬಿಳುಪಿನ ಬಣ್ಣದಲ್ಲಿ ಬಿಡಿಸಿರುವ ಒಂದು ಹೆಣ್ಣು ಹಾಗೂ ಗಂಡಿನ ಮುಖಗಳಿರುವ ಅತ್ಯುತ್ತಮ ಪೈಂಟಿಂಗ್ ಒಂದನ್ನು ಸಲ್ಮಾನ್ ಖಾನ್ ಕೊಡುಗೆಯಾಗಿ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ಕಬೀರ್ ಖಾನ್ ನಾನು ನನ್ನ ನಟ, ನಿರ್ಮಾಪಕ, ಜೊತೆಗೆ ಗೆಳೆಯನೂ ಆಗಿರುವ ಸಲ್ಮಾನ್ ಖಾನ್ ಅವರಿಂದ ಒಂದು ಅತ್ಯುತ್ತಮ ಗಿಫ್ಟ್ ಪಡೆದಿದ್ದೇನೆ ಎಂದಿದ್ದಾರೆ.
 
ಭಜರಂಗಿ ಭಾಯಿಜಾನ್ ಸಿನಿಮಾಕ್ಕೂ ಮುನ್ನವೇ ಕಬೀರ್ ಖಾನ್ 2012ರಲ್ಲಿ ಬಿಡುಗಡೆಯಾದ ಏಕ್ತಾ ಟೈಗರ್ ಸಿನಿಮಾದಲ್ಲೂ ಸಲ್ಲು ಜೊತೆ ಕೆಲಸ ಮಾಡಿದ್ದರು. ಇದೀಗ ಮತ್ತೆ ಇಬ್ಬರೂ ಸೇರಿ ಇಡೀ ವಿಶ್ವವೇ ಮೆಚ್ಚಿದ ಭಜರಂಗಿ ಭಾಯಿಜಾನ್ ಅನ್ನೋ ಸಿನಿಮಾವನ್ನು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ