ಕ್ವಾಂಟಿಕೋ ಶೋ ನೋಡಲು ಉತ್ಸುಕರಾಗಿರುವ ಸಲ್ಮಾನ್ ಖಾನ್

ಗುರುವಾರ, 1 ಅಕ್ಟೋಬರ್ 2015 (10:56 IST)
ಮಾಜಿ ವಿಶ್ವ ಸುಂದರಿ, ಬಾಲಿವುಡ್ ನ ಪ್ರತಿಭಾವಂತ ನಟಿ ಪ್ರಿಯಾಂಕ ಛೋಪ್ರಾ ನಟಿಸಿರುವ ಕ್ವಾಂಟಿಕೋ ಶೋ ಇದೇ ವಾರ ಅಂದ್ರೆ ಅಕ್ಟೋಬರ್ 3 ರಿಂದ ಪ್ರಸಾರವಾಗಲಿದೆ. ಉತ್ತರ ಅಮೇರಿಕಾದ ಟಿವಿ ಶೋ ಇದಾಗಿದ್ದು, ಪ್ರಿಯಾಂಕ ಇದರಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಆದ್ರೆ ಪ್ರಿಯಾಂಕಳನ್ನು ಈ ಶೋದಲ್ಲಿ ನೋಡಲು ಸಲ್ಮಾನ್ ಖಾನ್ ತುಂಬಾನೇ ಕಾತರದಿಂದ ಕಾಯುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಲ್ಲು ಯಾವಾಗ ಈ ಶೋ ಪ್ರಸಾರವಾಗುತ್ತೆ ಅಂತಾ ಕೇಳಿದ್ದಾರೆ. ಆಗಲೇ ಕಾರ್ಯಕ್ರಮದ ಬಗ್ಗೆ ಸಲ್ಲು ಎಷ್ಟು ಉತ್ಸುಕರಾಗಿದ್ದಾರೆ ಅನ್ನೋದು ತಿಳಿಯುತ್ತೆ.
 
ಇನ್ನು ಮೊನ್ನೆ ಮೊನ್ನೆಯಷ್ಟೇ ಬಾಲಿವುಡ್ ನಟಿಯರಾದ ದೀಪಿಕಾ ಹಾಗೂ ಬಿಪಾಸಾ ಬಸು ಪಿಗ್ಗಿಗೆ ಶುಭ ಹಾರೈಸಿದ್ದರು. ಇದೀಗ ಸಲ್ಲು ಕೂಡ ಪಿಗ್ಗಿ ಕಾರ್ಯಕ್ರಮಕ್ಕೆ ಕಾಯುತ್ತಿದ್ದಾರೆ.ಇದರಲ್ಲಿ  ಅಲ್ಸೆಕಾ ಪಾರೀಸ್ ಪಾತ್ರದಲ್ಲಿ ಪಿಗ್ಗಿ ನಟಿಸಿದ್ದಾರೆ. ಸ್ಟಾರ್ ವರ್ಡ್ ಇಂಡಿಯಾ ಚಾನೆಲ್ ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ವೆಬ್ದುನಿಯಾವನ್ನು ಓದಿ