ದಬಾಂಗ್ 3 ಸಿನಿಮಾದಲ್ಲಿ ಕಿಚ್ಚ ಸುದೀಪ್ ಗೆ ಡೈಲಾಗ್ ಬರೆದುಕೊಟ್ಟ ಸಲ್ಮಾನ್ ಖಾನ್

ಗುರುವಾರ, 5 ಡಿಸೆಂಬರ್ 2019 (09:06 IST)
ಮುಂಬೈ: ದಬಾಂಗ್ 3 ಎಂಬ ಬಾಲಿವುಡ್ ಸಿನಿಮಾದಲ್ಲಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ವಿರುದ್ದ ಖಳ ನಾಯಕನ ಪಾತ್ರ ಮಾಡುತ್ತಿರುವ ಕಿಚ್ಚ ಸುದೀಪ್ ಈ ಸಿನಿಮಾದ ಒಂದೊಂದೇ ಗುಟ್ಟುಗಳನ್ನು ಹೊರಬಿಡುತ್ತಿದ್ದಾರೆ.


ಮೊನ್ನೆಯಷ್ಟೇ ಈ ಸಿನಿಮಾಗಾಗಿ ದೇಹದಂಡಿಸಿದ ವಿಡಿಯೋ ಪೋಸ್ಟ್ ಮಾಡಿದ್ದ ಕಿಚ್ಚ ಸುದೀಪ್ ತಮ್ಮ ಲುಕ್ ಜತೆಗೆ ಹಿಂದಿ ಭಾಷೆಯಲ್ಲಿ ಡೈಲಾಗ್ ಒಂದನ್ನೂ ಬರೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಬರುವ ತಮ್ಮ ಮೆಚ್ಚಿನ ಸಂಭಾಷಣೆಯಿದು ಎಂದಿರುವ ಕಿಚ್ಚ ಇನ್ನೊಂದು ವಿಚಾರವನ್ನೂ ಬರೆದುಕೊಂಡಿದ್ದಾರೆ.

ಅಂದ ಹಾಗೆ, ಈ ಡೈಲಾಗ್ ನ್ನು ಬರೆದಿರುವುದು ಸ್ವತಃ ಸಲ್ಮಾನ್ ಖಾನ್ ಎಂಬ ವಿಚಾರವನ್ನು ಕಿಚ್ಚ ಬಹಿರಂಗಪಡಿಸಿದ್ದಾರೆ. ಅಲ್ಲಿಗೆ ಈ ಸಿನಿಮಾದಲ್ಲಿ ಸಲ್ಮಾನ್ ಪೆನ್ನು ಹಿಡಿದಿರುವುದೂ ಗೊತ್ತಾಗಿದೆ.ಡಿಸೆಂಬರ್ 20 ಕ್ಕೆ ಹಿಂದಿ, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ