ಸಲ್ಮಾನ್ ಖಾನ್ ಆರೋಗ್ಯವಾಗಿದ್ದಾರೆ: ಅರ್ಪಿತಾ

ಬುಧವಾರ, 8 ಜುಲೈ 2015 (10:17 IST)
ಬೀಯಿಂಗ್ ಹ್ಯೂಮನ್ ನಟ ಸಲ್ಮಾನ್ ಖಾನ್ ಅವರಿಗೆ ಹುಷಾರಿಲ್ಲ ಎನ್ನುವ ಸುದ್ದಿಯ ಬಗ್ಗೆ ಅವರ ಅಭಿಮಾನಿಗಳು ಚಿಂತಿತರಾಗಿದ್ದರು. ಆದರೆ ಅಂತಹದ್ದೇನೂ ಇಲ್ಲ, ನೀವು ಹೆದರುವ ಅಗತ್ಯವಿಲ್ಲ ಎಂದು ಭಜರಂಗಿ ಭಾಯ್ಜಾನ್ ಹೀರೋ ಸಲ್ಲು ಮಿಯ ಅವರ ಪ್ರಿಯ ತಂಗಿ ಅರ್ಪಿತ ಖಾನ್ ಶರ್ಮಾ ಟ್ವೀಟ್ ಮಾಡಿ ಹೇಳಿದ್ದಾರೆ. 
ಮುಖ್ಯವಾಗಿ ಸಲ್ಮಾನ್ ಖಾನ್ ಅವರಿಗೆ ಏನಾಗಿತ್ತು? ಈ ರೀತಿ ಸುದ್ದಿ ಹರಡಲು ಕಾರಣವೇನು? ಎನ್ನುವ ಪ್ರಶ್ನೆಗಳು ಮೂಡುವುದು ಸಹಜ. ಈ ರೀತಿ ಆಗಲು ಮುಖ್ಯ ಕಾರಣ ಸಲ್ಮಾನ್ ಖಾನ್ ಅವರು ಭಜರಂಗಿ ಬಾಯ್ಜಾನ್ ಚಿತ್ರದ ಪ್ರಮೋಶನಲ್ ಕೆಲಸಗಳಿಗೆಂದು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದರು. ನಿರಂತರವಾದ ಕೆಲಸದ ಕಾರಣ ಅವರಿಗೆ ಸಿಕ್ಕಾಪಟ್ಟೆ ಬೆನ್ನು ನೋವು ಉಂಟಾಗಿತ್ತು. ಆದಕಾರಣ ಸಲ್ಲುಗೆ ಅನಾರೋಗ್ಯ ಎನ್ನುವ ಸುದ್ದಿ ಕೇಳಿ ಬಂದಿತ್ತು.
 
ಮುಖ್ಯವಾಗಿ ಭಾಯ್ಜಾನ್ ಚಿತ್ರದ ಪ್ರಮೋಶನಲ್ ಕೆಲಸಕ್ಕೆಂದು ಸಲ್ಲು ಟೀವಿ ಕಾರ್ಯಕ್ರಮಗಳು, ಅದೂ ಇದೂ ಎಂದು  ಈ ದಬಾಂಗ್ ಹೀರೋ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದರಿಂದ ಅನಾರೋಗ್ಯ  ಆಗಿದೆ ಎನ್ನುವ ಸುದ್ದಿ ಇತ್ತು. ಆದರೇ, ಅರ್ಪಿತ ಹಾಗೇನೂ ಇಲ್ಲ ಎಂದು ಹೇಳಿ ಎಲ್ಲರಲ್ಲೂ ಸಮಾಧಾನ ತಂದು ಕೊಟ್ಟಿದ್ದಾರೆ. ಭಜರಂಗಿ ಇದೇ ತಿಂಗಳು 17 ರಂದು ಬಿಡುಗಡೆ ಆಗುತ್ತಿದೆ. ಆ ಚಿತ್ರದಲ್ಲಿ ಕರೀನಾ ಕಪೂರ್ ಖಾನ್, ನವಜುದ್ದೀನ್ ಸಿದ್ದಿಕಿ ಅವರು ಮುಖ್ಯ ಪಾತ್ರಧಾರಿಗಳಾಗಿದ್ದಾರೆ.

ವೆಬ್ದುನಿಯಾವನ್ನು ಓದಿ