ಕನ್ನಡ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟನೆ ?!

ಮಂಗಳವಾರ, 31 ಮಾರ್ಚ್ 2015 (10:07 IST)
ವದಂತಿಗಳಿಗೆ ತಲೆ ಬುಡ ಇರಲ್ಲ. ಆದರು ಸಹಿತ ಇಂತಹ ಸುದ್ದಿ ಓದಲು ಹೆಚ್ಚು ಆಸ್ಥೆ ತೋರುವ ಮನಸ್ಸು ನಮ್ಮದು. ಈಗ ಹರಡಿರುವ ವದಂತಿ ಪ್ರಕಾರ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂದರೆ ಅವರು ಚಂದನವನದ ಚಿತ್ರವನ್ನು ರೀಮೇಕ್ ಮಾಡಿ ಅದರಲ್ಲಿ ನಟಿಸುತ್ತಿದ್ದಾರೆ. ಬಂದಿರುವ ಸುದ್ದಿ ಪ್ರಕಾರ ಸಲ್ಲು ಮಿಯಾ ಅವರು ಈಗ ಅಂತಹ ಸುದ್ದಿ ಮೂಲಕ ಮತ್ತೆ ಕನ್ನಡಿಗರ ಗಮನ ಸೆಳೆದಿದ್ದಾರೆ.ಕೊಇಮೊಇ(Koimoi) ಎನ್ನುವ ವೆಬ್ ಸೈಟ್ ಇಂತಹ ಸುದ್ದಿಯನ್ನು ಹಾಕಿದೆ. ಇದರ ಅನ್ವಯ ಸಲ್ಮಾನ್ ಖಾನ್ ಅವರು ದರ್ಶನ್ ಅವರು ಅಭಿನಯಿಸಿದ್ದ ಸಂಗೊಳ್ಳಿ ರಾಯಣ್ಣ ಚಿತ್ರದ ಹಿಡಿ ಅವತರಣಿಕೆಯಲ್ಲಿ ನಟಿಸುತ್ತಿದ್ದಾರೆ. ಆದರೆ ನಾಳೆ ಎಪ್ರಿಲ್ 1  ಆದ್ದರಿಂದ ಯಾರು ಹೇಗೆ ಯಾವ ರೀತಿ ಫೂಲ್ ಮಾಡುತ್ತಾರೋ ಗೊತ್ತಿಲ್ಲ, ಏನೇ ಆದರೂ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಗಳಿಕೆ ಮಾಡಿದ ಟಾಪ್ ಚಿತ್ರ ಸಂಗೊಳ್ಳಿ ರಾಯಣ್ಣ ಹಿನಿಡ್ಗೆ ಹೋಗುತ್ತದೆ ಎನ್ನುವ ಸಂಗತಿ ಎಲ್ಲರಿಗೂ ಖುಷಿ ನೀಡುವಂತಹದ್ದೇ ಆಗಿದೆ. 
ಪ್ರಸ್ತುತ ಸಲ್ಲು ಮಿಯಾ ಪ್ರೇಂ ರತನ್ ಧನ್ ಪ್ಯಾರೋ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಅದಾದ ಬಳಿಕ ಸುಲ್ತಾ, ಇದರ ನಡುವೆ ಭಜರಂಗಿ ಭಾಯ್ಜಾನ್, ಜೊತೆಗೆ ಕೋರ್ಟ್ ಕೇಸ್ಗಳು ಇವೆಲ್ಲದರ ಮಧ್ಯೆ ಕನ್ನಡ ರೀಮೇಕ್ ಗೆ ಅದೆಷ್ಟರಮಟ್ಟಿಗೆ ಜಾಗ ಇದೆ ? ಅದನ್ನು ನೀವೆ ಯೋಚಿಸ ಬೇಕು.

ವೆಬ್ದುನಿಯಾವನ್ನು ಓದಿ