ಬಿಗ್ ಬಾಸ್ 9ನೇ ಅವತರಣಿಕೆಯಲ್ಲಿ ಮಿಂಚಲಿದ್ದಾರೆ ಸಲ್ಮಾನ್

ಮಂಗಳವಾರ, 19 ಮೇ 2015 (10:30 IST)
ಸಲ್ಮಾನ್ ಖಾನ್ ಬಗ್ಗೆ ಈಗ  ದಿನಕ್ಕೊಂದು ಸುದ್ದಿ. ಈಗ ಯಾವ ಸುದ್ದಿಗೆ ಪ್ರಾಮುಖ್ಯತೆ ಇದೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಬಿಗ್ ಬಾಸ್  ಬಗ್ಗೆ ನಾವು ಹೇಳ ಹೊರಟಿರುವುದು. ಬಿಗ್ ಬಾಸ್ ರಿಯಾಲಿಟಿ ಷೋ ಅನೇಕ ಅವತರಣಿಕೆಗಳನ್ನು ಸಲ್ಮಾನ್ ಖಾನ್ ಅವರು ನಡೆಸಿಕೊಟ್ಟಿದ್ದಾರೆ. ಆದರೆ ಬಿಗ್ ಬಾಸ್8 ಅಷ್ಟೊಂದು ಯಶಸ್ವಿ ಆಗಲಿಲ್ಲ. ಮುಖ್ಯವಾಗಿ ಸಲ್ಮಾನ್ ಖಾನ್ ತಮ್ಮ ಸ್ಥಾನವನ್ನು  ನಿರ್ದೇಶಕಿ ಫರಾಖಾನ್ ಗೆ ಬಿಟ್ಟು ಕೊಟ್ಟು ಭಜರಂಗಿ ಬಾಯ್ಜಾನ್ ಚಿತ್ರದ  ಶೂಟಿಂಗ್ ಗೆಂದು ಹೊರಟು ಹೋದರು. 
ಬಿಗ್ ಬಾಸ್ ಗೆ ಆ ಬಳಿಕ  ಬಿಗ್ ಬಾಸ್ ಹಲ್ಲಬೋಲ್ ಎನ್ನುವ ಹೆಸರು ನೀಡಿ ಒಂದು ತಿಂಗಳು ಮುಂದುವರಿಕೆ ಮಾಡಿದರೂ ಸಹಿತ ಫರಾ  ಮಾತು ಮೋಡಿ ಮಾಡಲೇ ಇಲ್ಲ ಬಿಗ್ ಬಾಸ್ ಪ್ರೇಕ್ಷಕರನ್ನು. ಸಲ್ಮಾನ್ ಅವರು ಮಾಡಿದ ಮ್ಯಾಜಿಕ್ ಫರಾ ಮಾಡಲಿಲ್ಲ ಎನ್ನುವುದು ಇಲ್ಲಿ ಬಹಳ ಮುಖ್ಯ. 
 
ಈ ಕಾರ್ಯಕ್ರಮಕ್ಕೆ ರಣವೀರ್ ಸಿಂಗ್ ಅವರನ್ನು ಹೋಸ್ಟ್ ಮಾಡಬೇಕು ಎಂದು  ಕಲರ್ ವಾಹಿನಿಯವರು ಆಶಿಸಿಸಿದರು. ಆದರೆ ಅವರ ಆಶಯವನ್ನು ಮಾನ್ಯ ಮಾಡಲಿಲ್ಲ ಆ ಯುವತಾರೆ. ಈಗ ಬಂದ ಸುದ್ದಿ ಪ್ರಕಾರ ಮತ್ತೊಮ್ಮೆ  ಸಲ್ಲು ಮಿಯಾ ಅವರೇ ಒಂಭತ್ತನೆಯ ಅವತರಣಿಕೆಯನ್ನು ಮುನ್ನಡೆಸುವ ಸಾಧ್ಯತೆಗಳಿವೆಯಂತೆ ?  
 
ಬಿಗ್ ಬಾಸ್ ನಾಲ್ಕನೇ ಸೀಸನ್ ನಿಂದ ಸಲ್ಮಾನ್ ಖಾನ್ ಅವರು ಕಾರ್ಯಕ್ರಮ ಮುನ್ನಡೆಸಲು ಆರಂಭಿಸಿದರು. ಈಗ ಒಂಭತ್ತನೆಯ  ಸೀಸನ್ ನಲ್ಲೂ ಸಲ್ಲು ಮಿಯಾ ಇರ್ತಾರ ? ಸಮಯವೇ ಎಲ್ಲಾ ತಿಳಿಸುತ್ತದೆ. ಅಲ್ಲಿವರೆಗೂ ಕಾಯೋಣ!

ವೆಬ್ದುನಿಯಾವನ್ನು ಓದಿ