ಪಂಜಾಬಿ ಸಂಪ್ರದಾಯದಲ್ಲಿ ತಿಳಿಸಿದಂತೆ ಮದುವೆ ಆಗ್ತಾರ ಸಲ್ಮಾನ್ ಖಾನ್ - ಕತ್ರಿನಾ ಕೈಫ್ ?

ಸೋಮವಾರ, 24 ನವೆಂಬರ್ 2014 (09:41 IST)
ಕಲೀರ ಈ ಪದಕ್ಕೆ ಅರ್ಥ ನಮಗಿಂತ ಉತ್ತರ ಭಾರತದವರಿಗೆ ಚೆನ್ನಾಗಿ ಗೊತ್ತು. ಏಕೆಂದರೆ ಈ ಪದ ಪಂಜಾಬಿ ಸಂಪ್ರದಾಯದ  ಒಂದು ಭಾಗವಾಗಿದೆ. ಕೈತುಂಬಾ ಕೆಂಪು -ಬಿಳಿ  ಬಳೆ ತೊಟ್ಟು , ಅವುಗಳ ಜೊತೆ ಒಂದು ತೂಗುವ ಆಭರಣ ಕಟ್ಟಿಕೊಂಡು ನೂತನ ವಧು ಅವಿವಾಹಿತರ  ತಲೆ ಮೇಲೆ ಅದನ್ನು ಅಲುಗಾಡಿಸಿದಾಗ ಅದರಿಂದ ದಾರ, ಎಲೆ ಬಿದ್ದರೆ ಅಂತಹವರಿಗೆ ಬೇಗ ಮದುವೆ ಆಗುತ್ತದೆ. ನೂತನ  ವಧು ನೀಡುವ ಅತ್ಯಂತ ಶಕ್ತಿಯುತ ಆಶೀರ್ವಾದ ಇದಾಗಿದೆ ಎಂದು ಅಲ್ಲಿನ ಸಂಪ್ರದಾಯದವರು ನಂಬುತ್ತಾರೆ. ನವವಧುವಿನ ಕೈಗಳಲ್ಲಿ ಬಳೆಗಳ ಜೊತೆ ಇರುವ ಆಭರಣವೇ ಕಲೀರ. 

 
ಇತ್ತೀಚಿಗೆ ಸಲ್ಮಾನ್ ಖಾನ್ ಅವರ ತಂಗಿಯ ಮದುವೆ ಸಮಯದಲ್ಲಿ ಅವರ ಸಹೋದರಿ ಅರ್ಪಿತ ಸಹ ಕಲೀರವನ್ನು ಧರಿಸಿದ್ದರು. ಆ ಸಮಾರಂಭದಲ್ಲಿ ಕತ್ರಿನ ಸಹ ಭಾಗಿಯಾಗಿದ್ದರು. ಅರ್ಪಿತ ತನ್ನ ಕೈಗಳನ್ನು ಅಲುಗಾಡಿಸಿದ ತಕ್ಷಣ ಆಕೆಯ ತಲೆ  ಮೇಲೆ ಒಂದು ಎಲೆ ಬಿತ್ತು. ಆಗ ಹಿರಿಯರು ಕಟ್ ಮದುವೆ ನಿಶ್ಚಯ ಎಂದು ಹೇಳಿದಾಗ ಆಕೆ ನಾಚಿದಳಂತೆ. ರಣಬೀರ್ ಕಪೂರ್ ಜೊತೆ ಪ್ರೀತಿಗೆ ಸದ್ಯದಲ್ಲೇ ಅರ್ಥ ಸಿಗುತ್ತಿದೆ ಎಂದಾಯಿತು.  
 
ಅದೇರೀತಿ ತನ್ನ ಅಣ್ಣ ಸಲ್ಮಾನ್ ಖಾನ್ ಅವರ ಆಶಯದಂತೆ ಅರ್ಪಿತ ಅವರ ತಲೆಯ ಮೇಲೆ ಕೈ ಅಲುಗಾಡಿಸಿದಾಗ ಸಲ್ಲು ಮಿಯಾ ತಲೆಯ ಮೇಲು ಸಹಿತ ಒಂದು ಎಲೆ ಬಿತ್ತಂತೆ. ಆತ ಈಗಾಗಲೇ ಅನೇಕ ಹುಡುಗಿಯರ ಮನ ಗೆದ್ದು, ಅನೇಕಾನೇಕ ಪ್ರೇಮಾಯಣದ ಮೂಲಕ ಜಗತ್ತಿಗೆ ಗೊತ್ತಾದ ಪ್ರೇಮಿ. ಅವರ ತಂಗಿ ಮಾಡಿದ ಈ ಸಂಪ್ರದಾಯದ ಕಾರಣದಿಂದಾದರು ಸಲ್ಮಾನ್  ಮದುವೆ ಆಗ್ತಾರ ಎನ್ನುವುದು ಬಾಲಿವುಡ್ ಮಂದಿಯ ಪ್ರಶ್ನೆ. 

ವೆಬ್ದುನಿಯಾವನ್ನು ಓದಿ