ಓದಲು ದುಡ್ಡಿರಲಿಲ್ಲ, ಊಟಕ್ಕೆ ಗತಿಯಿರಲಿಲ್ಲ: ಸಮಂತಾ ಋತು ಪ್ರಭು!
ಬಾಲ್ಯದಲ್ಲಿ ಚೆನ್ನಾಗಿ ಓದಿದರೆ ಮುಂದೆ ಒಳ್ಳೆ ನೆಲೆ ಕಂಡುಕೊಳ್ಳುತ್ತಿ ಎಂದು ಹೇಳಲಾಗುತ್ತಿತ್ತು. ಹಾಗೆಯೇ ನಾನು ಚೆನ್ನಾಗಿ ಓದಿದೆ. ಎಸ್ ಎಸ್ ಎಲ್ ಸಿ, ಪಿಯುಸಿ, ಕಾಲೇಜಿನಲ್ಲಿ ಟಾಪರ್ ಆಗಿದ್ದೆ. ಆದರೆ ಬಳಿಕ ಹೈಯರ್ ಸ್ಟಡಿ ಮಾಡಬೇಕು ಎಂದಾಗ ನನ್ನ ಪೋಷಕರ ಬಳಿ ದುಡ್ಡಿರಲಿಲ್ಲ.
ನಾನು ಸುಮಾರು ಎರಡು ತಿಂಗಳ ಕಾಲ ಕೇವಲ ಒಂದು ಹೊತ್ತು ಊಟ ಮಾಡಿ ಜೀವನ ಮಾಡಿದ್ದೆ. ಸಿಕ್ಕ ಸಿಕ್ಕ ಕೆಲಸಗಳನ್ನೆಲ್ಲಾ ಮಾಡಿದ್ದೆ. ಈವತ್ತು ನಾನು ಇಲ್ಲಿದ್ದೇನೆ ಎಂದರೆ ನೀವೂ ಕೂಡಾ ಕಷ್ಟಪಟ್ಟರೆ ಒಳ್ಳೆಯ ಸ್ಥಿತಿಗೆ ತಲುಪಬಹುದು ಎಂಬುದಕ್ಕೆ ಉದಾಹರಣೆ ಎಂದಿದ್ದಾರೆ ಸಮಂತಾ.