ವಿಜಯ್ ಜೊತೆ ಸಮಂತಾ ರೊಮ್ಯಾನ್ಸ್?

ಸೋಮವಾರ, 6 ಜೂನ್ 2022 (09:20 IST)
ಚೆನ್ನೈ: ದಳಪತಿ ವಿಜಯ್ ಮುಂದಿನ ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆಗೆ ಈಗ ಉತ್ತರವೊಂದು ಸಿಕ್ಕಿದೆ. ಮೂಲಗಳ ಪ್ರಕಾರ ದಳಪತಿ 67 ನೇ ಸಿನಿಮಾಗೆ ಸಮಂತಾ ನಾಯಕಿಯಾಗಲಿದ್ದಾರಂತೆ.

ಸಮಂತಾ ಋತು ಪ್ರಭು ಈಗಾಗಲೇ ವಿಜಯ್ ಜೊತೆ ಕತ್ತಿ, ಮರ್ಸೆಲ್ ನಂತಹ ಹಿಟ್ ಸಿನಿಮಾಗಳಲ್ಲಿ ಜೋಡಿಯಾಗಿ ಅಭಿನಯಿಸಿದ್ದರು. ಒಂದು ವೇಳೆ ಈ ಸಿನಿಮಾದಲ್ಲೂ ಜೋಡಿಯಾದರೆ ನಾಲ್ಕನೇ ಬಾರಿಗೆ ಒಂದೇ ಸಿನಿಮಾದಲ್ಲಿ ಅಭಿನಯಿಸಿದಂತಾಗುತ್ತದೆ.

ಇನ್ನು, ವಿಜಯ್ 67 ನೇ ಸಿನಿಮಾವನ್ನು ಅವರಿಗೆ ಮಾಸ್ಟರ್ ನಂತಹ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಲೋಕೇಶ್ ಕನಕರಾಜು ನಿರ್ದೇಶಿಸುತ್ತಿದ್ದಾರೆ. ಸದ್ಯಕ್ಕೆ ವಿಕ್ರಂ ಸಿನಿಮಾ ಮಾಡಿ ಯಶಸ್ಸಿನಲ್ಲಿರುವ ಲೋಕೇಶ್ ವಿಜಯ್ ಚಿತ್ರಕ್ಕೆ ತಯಾರಿ ಈಗಾಗಲೇ ಆರಂಭಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ