ಸಂಚಾರಿ ವಿಜಯ್ ಅಭಿನಯದ ಪುಕ್ಸಟೆ ಲೈಫ್ ಬಿಡುಗಡೆ

ಶುಕ್ರವಾರ, 24 ಸೆಪ್ಟಂಬರ್ 2021 (09:05 IST)
ಬೆಂಗಳೂರು: ಇತ್ತೀಚೆಗಷ್ಟೇ ಅಗಲಿದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಪುಕ್ಸಟೆ ಲೈಫು ಚಿತ್ರ ಇಂದಿನಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.


ಅರವಿಂದ್ ಕುಪ್ಳೀಕರ್ ನಿರ್ದೇಶನದ ಸಿನಿಮಾದಲ್ಲಿ ಸಂಚಾರಿ ವಿಜಯ್ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿನ್ನೆ ಸಂಜೆ ಚಿತ್ರದ ಪ್ರೀಮಿಯರ್ ಶೋ ಇಟಿಎ ಮಾಲ್ ನಲ್ಲಿ ನಡೆದಿದೆ.

ಕಳೆದ ವಾರ ಲೂಸ್ ಮಾದ ಯೋಗಿ ಅಭಿನಯದ ಲಂಕೆ ಸಿನಿಮಾ ಬಿಡುಗಡೆಯಾಗಿ ಸುದ್ದಿಯಾಗಿತ್ತು. ಈ ವಾರ ಮತ್ತೊಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಮೂಲಕ ಚಿತ್ರಮಂದಿರಗಳಲ್ಲಿ ಸಿನಿ ಚಟುವಟಿಕೆ ಮತ್ತೆ ಆರಂಭಗೊಳ್ಳುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ