ಸಂಕ್ರಾಂತಿಗೆ ಪವರ್ ಸ್ಟಾರ್ ಪುನೀತ್ ‘ಜೇಮ್ಸ್’ ರಿಲೀಸ್?!

ಗುರುವಾರ, 23 ಸೆಪ್ಟಂಬರ್ 2021 (10:20 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಬಿಡುಗಡೆ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.


ಎಲ್ಲಾ ಸರಿ ಹೋಗಿದ್ದರೆ ಸಿನಿಮಾ ಈ ದಸರಾ ಹಬ್ಬದ ವೇಳೆಗೆ ಬಿಡುಗಡೆಯಾಗಬೇಕಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಚಿತ್ರದ ಕೆಲಸಗಳು ತಡವಾಗಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಸಿನಿಮಾ ಮುಂಬರುವ ಸಂಕ್ರಾಂತಿ ಹಬ್ಬದ ವೇಳೆ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಬಗ್ಗೆ ಚಿತ್ರತಂಡ ಸದ್ಯದಲ್ಲೇ ಪ್ರಕಟಣೆ ಹೊರಹಾಕಲಿದೆ. ಲಾಕ್ ಡೌನ್ ಗೂ ಮೊದಲು ಪುನೀತ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಯಾಗಿತ್ತು. ಇದರ ನಂತರ ಬಿಡುಗಡೆಯಾಗುತ್ತಿರುವ ಜೇಮ್ಸ್. ಇದಲ್ಲದೆ, ಪುನೀತ್ ಕೈಯಲ್ಲಿ ಇನ್ನೂ ಮೂರು ಸಿನಿಮಾಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ