ಸಂಚಾರಿ ವಿಜಯ್ ಎರಡನೇ ಪುಣ್ಯತಿಥಿ: ಗೆಳೆಯರಿಂದ ಅರ್ಥಪೂರ್ಣ ಆಚರಣೆ
ಎರಡು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಸಂಚಾರಿ ವಿಜಯ್ ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ್ದರು. ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅವರ ಅಂಗಾಂಗ ದಾನ ಮಾಡಲಾಗಿತ್ತು. ಇದರಿಂದಾಗಿ ಅವರು ಸಾವಿನಲ್ಲೂ ಆದರ್ಶರಾಗಿದ್ದರು.
ಇದೀಗ ಅವರ ಸವಿ ನೆನಪಿನಲ್ಲಿ ಅವರ ಗೆಳೆಯರು ಸಮಾಧಿ ಬಳಿಯೇ ರಕ್ತದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬದುಕಿದ್ದಾಗಲೇ ಉಸಿರು ತಂಡದ ಮೂಲಕ ಸಮಾಜಮುಖೀ ಕೆಲಸಗಳಲ್ಲಿ ವಿಜಯ್ ತೊಡಗಿಸಿಕೊಂಡಿದ್ದರು. ಇದೀಗ ಅವರ ಸಾವಿನ ಬಳಿಕವೂ ಹೆಸರು ಉಳಿಸುವ ಕೆಲಸವನ್ನು ಗೆಳೆಯರು ಮಾಡುತ್ತಿದ್ದಾರೆ.