ಸ್ನೇಹಿತನಿಗೆ 52 ಲಕ್ಷದ ಕಾರು ಗಿಫ್ಟ್ ಕೊಟ್ಟ ಧ್ರುವ ಸರ್ಜಾ

ಶುಕ್ರವಾರ, 16 ಜೂನ್ 2023 (20:03 IST)
Photo Courtesy: Twitter
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಸ್ನೇಹಿತನ ಹುಟ್ಟುಹಬ್ಬಕ್ಕೆ 52 ಲಕ್ಷದ ಬೆಲೆ ಬಾಳುವ ಕಾರು ಗಿಫ್ಟ್ ಮಾಡಿದ್ದಾರೆ.

ಸ್ನೇಹಿತ ಅಶ್ವಿನ್ ಹುಟ್ಟುಹಬ್ಬಕ್ಕೆ ಧ್ರುವ 52 ಲಕ್ಷ ಮೌಲ್ಯದ ಫಾರ್ಚುನರ್ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಕಾರಿನಲ್ಲಿ ಸ್ನೇಹಿತನ ತಂದೆ-ತಾಯಿಯ ಫೋಟೋ ಇಟ್ಟು ಕೊಟ್ಟಿದ್ದಾರೆ.

ಅಶ್ವಿನ್ ಸದಾ ಧ್ರುವ ಜೊತೆಗಿರುತ್ತಾರೆ. ಧ್ರುವ ಸಿನಿಮಾಗಳಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಅಶ್ವಿನ್ ನೋಡಿಕೊಳ್ಳುತ್ತಾರೆ. ಇದೇ ಪ್ರೀತಿಯಿಂದ ಸ್ನೇಹಿತನಿಗೆ ಧ್ರುವ ದುಬಾರಿ ಕಾರಿನ ಗಿಫ್ಟ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ