ಅಶ್ಲೀಲ ವಿಡಿಯೋ ಬಗ್ಗೆ ನಟಿ ಸಂಚಿತಾ ಶೆಟ್ಟಿ ಸ್ಪಷ್ಟನೆ

ಶನಿವಾರ, 4 ಮಾರ್ಚ್ 2017 (17:54 IST)
ಕನ್ನಡದ ಬೆಡಗಿ ಸಂಚಿತಾ ಶೆಟ್ಟಿ ತಮಿಳು, ತೆಲುಗು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ’ಆರೇಂಜ್’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟವರು. ಆ ಚಿತ್ರದಲ್ಲಿ ಹೀರೋಯಿನ್ ಅಲ್ಲದಿದ್ದರೂ ಒಳ್ಳೆಯ ಪಾತ್ರ ಸಿಕ್ಕಿತ್ತು. 
 
ಖ್ಯಾತ ಗಾಯಕಿ ಸುಚಿತ್ರಾ ಅವರ ಟ್ವಿಟ್ಟರ್ ಖಾತೆ ಮೂಲಕ ಸಂಚಿತಾ ಶೆಟ್ಟಿ ಅವರದು ಎನ್ನಲಾದ ಅಶ್ಲೀಲ ವಿಡಿಯೋ ಲೀಕ್ ಆಗಿದೆ. ಆದರೆ ಆ ವಿಡಿಯೋದಲ್ಲಿರುವುದು ತಾನಲ್ಲ ಎಂದು ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಅಶ್ಲೀಲ ಚಿತ್ರ ನನ್ನದಲ್ಲ ಎಂದಿದ್ದಾರೆ.
 
ತನ್ನ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದ್ದು, ಯಾರೋ ಅಶ್ಲೀಲ ಚಿತ್ರಗಳನ್ನು ಹರಿಯಬಿಟ್ಟಿದ್ದಾರೆ. ಆದರೆ ಆ ಫೋಟೋ ಮತ್ತು ವಿಡಿಯೋ ಕ್ಲಿಪ್‌ನಲ್ಲಿರುವುದು ತಾನಲ್ಲ ಎಂದು ಹೇಳಿದ್ದಾರೆ. ಈ ಹಿಂದೆಯೂ ಸುಚಿತ್ರಾ ಅವರ ಟ್ವಿಟ್ಟರ್ ಹ್ಯಾಂಡ್ಲ್ ಬಳಸಿ ತ್ರಿಷಾ, ಧನುಷ್, ರಾಣಾ ದಗ್ಗುಬಾಟಿ, ಅನಿರುದ್ಧ ರವಿಚಂದರ್, ಆಂಡ್ರಿಯಾ, ಹನ್ಸಿಕಾ ಸೇರಿದಂತೆ ಹಲವರ ಹೆಸರಿನ ಅಶ್ಲೀಲ ಚಿತ್ರಗಳು ಬಿಡುಗಡೆಯಾಗಿದ್ದವು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ