ಚಿತ್ರ ನಟ ಕಿಚ್ಚ ಸುದೀಪ್ ಮತ್ತು ಪ್ರಿಯಾ ದಾಂಪತ್ಯದಲ್ಲಿ ಬಿರುಕು: ವಿಚ್ಚೇದನಕ್ಕೆ ನಿರ್ಧಾರ

ಶುಕ್ರವಾರ, 11 ಸೆಪ್ಟಂಬರ್ 2015 (20:39 IST)
ಪ್ರೇಮ ವಿವಾಹವಾಗಿದ್ದ ಚಿತ್ರ ನಟ ಕಿಚ್ಚ ಸುದೀಪ್ ಮತ್ತು ಪ್ರಿಯಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಚೇದನ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕಳೆದ 2001ರಲ್ಲಿ ಪರಸ್ಪರ ಪ್ರೇಮಿಸಿ ವಿವಾಹವಾಗಿದ್ದ ನಟ ಸುದೀಪ್ ಮತ್ತು ಪ್ರಿಯಾ 14 ವರ್ಷಗಳ ಸಂಸಾರದ ನಂತರ ಇದೀಗ ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
 
ಕೇರಳದ ಮಲೆಯಾಳಿ ನಾಯರ್ ಕುಟುಂಬದ ಪ್ರಿಯಾ ರಾಧಾಕೃಷ್ಣನ್ ಮತ್ತು ಸುದೀಪ್ 14 ವರ್ಷಗಳ ಕಾಲ ಸುಖ ಸಂಸಾರ ನಡೆಸಿದ್ದರು. ಕೆಲ ತಿಂಗಳುಗಳಿಂದ ಪರಸ್ಪರ ವೈಮನಸ್ಸಿನಿಂದಾಗಿ ಇದೀಗ ಮನಸ್ತಾಪ ಉಂಟಾಗಿದೆ ಎಂದು ಹೇಳಲಾಗುತ್ತಿದೆ. 
 
2013ರಲ್ಲಿ ಪತ್ನಿಗಾಗಿ 360 ಸ್ಟೇಜ್ ಎನ್ನುವ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿ ಸ್ಥಾಪಿಸಿದ್ದ ಸುದೀಪ್, ಪತ್ನಿಯನ್ನೇ ಮುಖ್ಯಸ್ಥರನ್ನಾಗಿಸಿದ್ದರು. ಪ್ರಿಯಾ ಕೂಡಾ ಧಾರವಾಹಿಯಲ್ಲಿ ನಟಿಸಿದ್ದರು   

ಕೋರ್ಟ್‌ನಲ್ಲಿ ಕೌಟಂಬಿಕ ನ್ಯಾಯಾಲಯದಲ್ಲಿ ಪ್ರಿಯಾ ಅರ್ಜಿ ಸಲ್ಲಿಸಿದ್ದು, 19 ಕೋಟಿ ಜೀವನಾಂಶ ನೀಡುವಂತೆ ಸುದೀಪ್‌ಗೆ ಕೋರಿದ್ದಾರೆ. ಪುತ್ರಿ ಚಿಕ್ಕವಳಾಗಿದ್ದರಿಂದ ಪತ್ನಿಯ ಕಸ್ಟಡಿಗೆ ನೀಡಲು ಸುದೀಪ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. 
 
ಸುದೀಪ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರಿಗೆ ಜಿಪಿಎ ನೀಡಿದ್ದು ಅವರು ಕೇಸ್ ನಡೆಸಿಕೊಂಡು ಹೋಗುತ್ತಾರೆ ಎನ್ನಲಾಗಿದೆ. 

ಮಾಧ್ಯಮದೊಂದಿಗೆ ಮಾತನಾಡಿದ ಸುದೀಪ್ ಹಲವು ವರ್ಷಗಳಿಂದ ಭಿನ್ನಾಭಿಪ್ರಾಯ ಉಂಟಾಗಿತ್ತು. ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ  ವಿಚ್ಚೇದನಕ್ಕೆ ಮುಂದಾಗಿದ್ದಾರೆ. ಇದು ವೈಯಕ್ತಿಕ ವಿಚಾರವಾಗಿದ್ದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. 
 
ಜೆಟ್‌ ಏರ್‌ವೇಸ್‌ನಲ್ಲಿ ಮತ್ತು ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಿಯಾ, ಸುದೀಪ್‌ರೊಂದಿಗೆ 2001ರಲ್ಲಿ ಪ್ರೇಮ ವಿವಾಹವಾಗಿದ್ದರು. 14 ವರ್ಷಗಳ ನಂತರ ಕೌಟಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ

ವೆಬ್ದುನಿಯಾವನ್ನು ಓದಿ