ಸ್ಯಾಂಡಲ್ ವುಡ್ ನಟರಿಗೆ ಹುಲಿ ಉಗುರಿನ ಲಾಕೆಟ್ ಸಂಕಷ್ಟ!
ವರ್ತೂರು ಸಂತೋಷ್ ಬಳಿಕ ಹುಲಿ ಉಗುರಿನ ಲಾಕೆಟ್ ಧರಿಸಿರುವ ನಟರ ಲಿಸ್ಟ್ ಒಂದೊಂದಾಗಿ ಹೊರಬೀಳುತ್ತಿದೆ. ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ವಿರುದ್ಧ ಇದೇ ದೂರು ಬಂದಿದೆ.
ಅದರ ಬೆನ್ನಲ್ಲೇ ಬಿಜೆಪಿ ಸಂಸದ, ನಟ ಜಗ್ಗೇಶ್ ಕೂಡಾ ಈ ಮೊದಲು ಸಂದರ್ಶನವೊಂದರಲ್ಲಿ ತಮ್ಮ ಬಳಿ ಹುಲಿ ಉಗುರಿನ ಲಾಕೆಟ್ ಇರುವ ವಿಚಾರವನ್ನು ಹೇಳಿಕೊಂಡ ವಿಡಿಯೋವೊಂದು ವೈರಲ್ ಆಗುತ್ತಿದೆ. ಹೀಗಾಗಿ ಈಗ ಈ ನಟರ ವಿರುದ್ಧವೂ ಅರಣ್ಯ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂದು ಕಾದುನೋಡಬೇಕಿದೆ.