ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಮೇಘನಾ ರಾಜ್ ಅವರು ತಮ್ಮ ಪ್ರಾಜೆಕ್ಟ್ ಹಾಗೂ ತಮ್ಮ ಮಗನ ವಿಚಾರ ಹಾಗೂ ಅತ್ಯಮೂಲ್ಯ ಕ್ಷಣಗಳ ಬಗ್ಗೆ ಪೋಸ್ಟ್ ಹಾಕುತ್ತಲೇ ಇರುತ್ತಾರೆ.
ಇದೀಗ ಇನ್ಸ್‌ಸ್ಟಾಗ್ರಾಂನಲ್ಲಿ ತಮ್ಮ ಸುಂದರ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಮನೆಯಲ್ಲಿ ದಸರಾ ಬೊಂಬೆಯಿಟ್ಟು ಅದರ ಮುಂದೆ ಬೊಂಬೆಯಂತೆ ಮೇಘನಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಈ ಫೋಟೋದಲ್ಲಿ ಕೆಂಪು ಸಲ್ವಾರ್‌ನಲ್ಲಿ, ಕೈತುಂಬಾ ಬಳೆ ಹಾಕಿ ಸುಂದರವಾಗಿ ಕಾಣಿಸುತ್ತಿದ್ದಾರೆ.
ಇನ್ನೂ ಫೋಟೋ ಕ್ಲಿಕ್ ಮಾಡಿದ ಕ್ರೆಡಿಟ್ ಅನ್ನು ನಟಿ, ನಿರೂಪಕಿ ಶ್ವೇತಾ ಚೆಂಗಪ್ಪಗೆ ಕೊಟ್ಟಿದ್ದಾರೆ . ಇದೀಗ ಮೇಘನಾ ಅವರ ಸುಂದರವಾದ ಪೋಟೋ ಹಿಂದಿನ ಕೈಚಳಕ ಶ್ವೇತ ಅವರಿದ್ದು ಎಂದು ಗೊತ್ತಾಗಿದೆ. ಫೋಟೋ ನೋಡಿದ ಅವರ ಅಭಿಮಾನಿಗಳು ಹಾರ್ಟ್ ಇಮೋಜಿ ಕಳುಹಿಸಿದ್ದರೆ.