ಬಾಲಿವುಡ್‌ಗೆ ಚಿಗರೆ ಕಂಗಳ ಬೆಡಗಿ ಐಂದ್ರಿತಾ ರೇ

ಶುಕ್ರವಾರ, 20 ಜನವರಿ 2017 (14:11 IST)
ಸ್ಯಾಂಡಲ್‌ವುಡ್ ಬೆಡಗಿ ಐಂದ್ರಿತಾ ರೇ ಬಾಲಿವುಡ್‍ಗೆ ಜಂಪ್ ಆಗಿದ್ದಾರೆ. ಈಗಾಗಲೆ ಚಿತ್ರದ ಶೂಟಿಂಗ್ ಆರಂಭವಾಗಿದ್ದು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ವಿಕಾಶ್ ಶರ್ಮಾ, ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮುಖ್ಯಭೂಮಿಕೆಯಲ್ಲಿರುವ ಸಿನೆಮಾ ಇದು.
 

ಸ್ವಿಟ್ಜರ್‌ಲ್ಯಾಂಡ್‍ನಲ್ಲಿ ಸದ್ಯಕ್ಕೆ ವಿಪರೀತ ಚಳಿ ಇದ್ದು ಉಷ್ಣಾಂಶ -15℃ ನಿಂದ -20°C ವರೆಗೆ ಇದೆ. ಇನ್ನೂ ಒಂದು ವಾರ ಕಾಲ ಅಲ್ಲೇ ಚಿತ್ರೀಕರಣ ನಡೆಯಲಿದೆ. ಐಂದ್ರಿತಾ ಈಗಾಗಲೆ ಎರಡು ಬೆಂಗಾಲಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
 
ಚಂದ್ರಕಾಂತ್ ಸಿಂಗ್ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ರೊಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ಉಳಿದಂತೆ ಸದ್ಯಕ್ಕೆ ಕನ್ನಡದಲ್ಲಿ ಬಹುತಾರಾಗಣದ ಚೌಕ ಚಿತ್ರದಲ್ಲಿ ಐಂದ್ರಿತಾ ಅಭಿನಯಿಸುತ್ತಿದ್ದಾರೆ. ಕಳೆದ ವರ್ಷ 3 ಚಿತ್ರಗಳಲ್ಲಿ ಅಭಿನಯಿಸಿದ್ದರು ಈ ಚಿಗರೆ ಕಂಗಳ ಬೆಡಗಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ