ತೆರೆಗೆ ಬರೋಕೆ ರೆಡಿಯಾಯ್ತು ಭಜರಂಗಿ 2, ಸಲಗ, ಕೋಟಿಗೊಬ್ಬ 3

ಬುಧವಾರ, 22 ಸೆಪ್ಟಂಬರ್ 2021 (12:27 IST)
ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅವಕಾಶ ನೀಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ.


ಭಜರಂಗಿ 2 ಸಿನಿಮಾ ಗಣೇಶ ಹಬ್ಬಕ್ಕೆ ತೆರೆ ಕಾಣಬೇಕಿತ್ತು. ಅದರೆ ಥಿಯೇಟರ್ ಗಳಲ್ಲಿ ಸಂಪೂರ್ಣ ಹಾಜರಾತಿಗೆ ಅವಕಾಶ ಕೊಡದ ಕಾರಣ ಮುಂದೂಡಿಕೆಯಾಗಿತ್ತು.

ಇದೀಗ ಭಜರಂಗಿ 2, ದುನಿಯಾ ವಿಜಯ್ ಅವರ ಸಲಗ, ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ಮೊದಲ ಪಂಕ್ತಿಯಲ್ಲಿರುವ ಸಿನಿಮಾಗಳು. ಅಕ್ಟೋಬರ್ ತಿಂಗಳಲ್ಲಿ ಈ ಎಲ್ಲಾ ಸಿನಿಮಾಗಳೂ ಬಿಡುಗಡೆಯಾಗುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ