ಎಂಇಎಸ್ ಪುಂಡಾಟಿಕೆ ವಿರುದ್ಧ ಸಿಡಿದೆದ್ದ ಸ್ಯಾಂಡಲ್ ವುಂಡ್ ನಟರು
ನಿನ್ನೆ ನಟ ದರ್ಶನ್, ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇಂದು ಅಭಿಷೇಕ್ ಅಂಬರೀಶ್ ಕೂಡಾ ಧ್ವನಿಯೆತ್ತಿದ್ದಾರೆ.
ಇದೀಗ ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಮಾಧ‍್ಯಮಗಳ ಮುಂದೆ ಮಾತನಾಡಿದ್ದು, ಎಂಇಎಸ್ ಸಂಘಟನೆಯನ್ನು ನಿಷೇಧಿಸಲು ಒತ್ತಾಯಿಸಿದ್ದಾರೆ. ಇನ್ನು ನಟಿ ಹರಿಪ್ರಿಯಾ ಕನ್ನಡ ಬಾವುಟವೊಂದರ ಜೊತೆಗಿನ ಫೋಟೋ ಪ್ರಕಟಿಸಿ ಧ್ವೇಷದ ಬೆಂಕಿ ಆರಲಿ, ಕನ್ನಡದ ಬಾವುಟ ಹಾರಲಿ, ನಾಡ ಧ್ವಜಕ್ಕೆ ಬೆಂಕಿ ಇಟ್ಟವರಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.