ವರ್ಮಾರ 'ಕಿಲ್ಲಿಂಗ್ ವೀರಪ್ಪನ್' ಆಗಿ ಸಂದೀಪ್ ಭಾರಧ್ವಜ್

ಸೋಮವಾರ, 29 ಜೂನ್ 2015 (10:15 IST)
ಬಾಲಿವುಡ್ ಪ್ರಸಿದ್ಧ ನಿರ್ದೇಶಕ ರಾಮ್ ಗೋಪಾಲ್ ವರ್ಮ್ ಅವರ ಮುಂದಿನ  ಚಿತ್ರ ಕಿಲ್ಲಿಂಗ್ ವೀರಪ್ಪನ್ ಬಗ್ಗೆ ಅಧಿಕ ಪ್ರಮಾಣದ ಆಸಕ್ತಿ ಉಂಟಾಗುವಂತೆ ಮಾಡುತ್ತಿದ್ದಾರೆ ವರ್ಮ. ಅವರು ಆ ಚಿತ್ರದ ಪಾತ್ರಗಳ ಫೋಟೋಗಳ ಬಿಡುಗಡೆ ಮಾಡುತ್ತಾ ಜನರ ಆಸಕ್ತಿಯನ್ನು ಹೆಚ್ಚು ಮಾಡುತ್ತಿದ್ದಾರೆ. ವರ್ಮ ಅವರು ಇತ್ತೀಚೆಗೆ ವೀರಪ್ಪನ್  ವೇಷಧಾರಿ ಚಿತ್ರವನ್ನು ಬಿಡುಗಡೆ ಮಾಡಿದರು. ಸಂದೀಪ್ ಭಾರದ್ವಾಜ್  ಅವರು ಈ ಪಾತ್ರಕ್ಕೆ ಆಯ್ಕೆ ಆಗಿದ್ದಾರೆ. ಇದು ಅವರ ಚೊಚ್ಚಲ ಚಿತ್ರವಾಗಿದೆ. 
ನಾನು ನನ್ನ ವೃತ್ತಿ ಬದುಕಲ್ಲಿ ಸಂದೀಪ್ ನಂತಹ ಕಲಾವಿದನನ್ನು ಕಂಡೇ ಇಲ್ಲ. ಇದು ಉತ್ಪ್ರೇಕ್ಷೆಯಲ್ಲ. ಅವರು ಪಾತ್ರದಲ್ಲಿ ಅಂಕಿತರಾಗುವ ಬಗೆಯು ಅದ್ಭುತ ಎಂದು ರಾಮ್ ಅವರು ಹೇಳಿದ್ದಾರೆ. ಆದರೆ ನಿಜ ಬದುಕಲ್ಲಿ ಜನರು ನಿಜವಾದ ವೀರಪ್ಪನ್ ಎಂದು ತೊಂದರೆ ಉಂಟು ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.
 
ಸಂದೀಪ್ ಅತ್ಯಂತ ಸೂಕ್ತವಾಗಿ ವೀರಪ್ಪನ್ ಅವರನ್ನು ಹೋಲುವ ಕಲಾವಿದರಾಗಿದ್ದಾರೆ ಎನ್ನುವುದು ವರ್ಮ ಅವರು ಬಿಡುಗಡೆ ಮಾಡಿದ ಪೋಸ್ಟರ್ ಗಳಿಂದ ತಿಳಿದು ಬಂದಿದೆ. ಸಂದೀಪ್ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮ ವಿದ್ಯಾರ್ಥಿ. ಈ ಚಿತ್ರದಲ್ಲಿ  ಶಿವರಾಜ್ ಕುಮಾರ್, ಪಾರೂಲ್ ಮತ್ತು ಯಜ್ಞ ಮುಖ್ಯಭೂಮಿಕೆಯಲ್ಲಿದಾರೆ. 

ವೆಬ್ದುನಿಯಾವನ್ನು ಓದಿ