ದಿಲ್ ವಾಲೇ ಸಿನಿಮಾ ಸೆಟ್‌ನಲ್ಲಿ ಸಾನಿಯಾ ಮಿರ್ಜಾ

ಬುಧವಾರ, 14 ಅಕ್ಟೋಬರ್ 2015 (11:09 IST)
ರೋಹಿತ್ ಶೆಟ್ಟಿ ನಿರ್ದೇಶನದ ದಿಲ್ ವಾಲೇ ಸಿನಿಮಾ ಚಿತ್ರೀಕರಣ ಹೈದ್ರಾಬಾದ್ ನಡೆಯುತ್ತಿದೆ. ಪ್ರತಿದಿನ ಶೂಟಿಂಗ್ ನಲ್ಲಿ ಬ್ಯುಯಿಯಾಗಿರುತ್ತಿದ್ದ ದಿಲ್ ವಾಲೇ ಸಿನಿಮಾದ ಕಲಾವಿದರು ನಿನ್ನೆ ಮಾತ್ರ ಫುಲ್ ರಿಲ್ಯಾಕ್ಸ್ ಆಗಿದ್ರು. ಅದಕ್ಕೆ ಕಾರಣ ಸಾನಿಯಾ ಮಿರ್ಜಾ.
ನಿನ್ನೆ ಭಾರತದ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ದಿಲ್ ವಾಲೇ ಸೆಟ್ ಗೆ ಆಗಮಿಸಿದ್ದರು. ಈ ವೇಳೆ ಸಾನಿಯಾ ಇಡೀ ಸಿನಿಮಾ ತಂಡಕ್ಕೇ ಬಿರಿಯಾನಿ ತಂದಿದ್ರಂತೆ. ಅಲ್ಲದೇ ಕೆಲ ಹೊತ್ತು ಸಿನಿಮಾ ತಂಡದವರೊಂದಿಗೆ ಕಳೆದ್ರಂತೆ. ಇನ್ನು ಸಾನಿಯಾ ಸೆಟ್ ಗೆ ಭೇಟಿ ನೀಡಿದ ಫೋಟೋವನ್ನು ಶಾರುಖ್ ಟ್ವಿರ್ ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ನೀವು ನೀಡಿದ ಬಿರಿಯಾನಿ ತುಂಬಾ ರುಚಿಯಾಗಿತ್ತು. ಆ ರುಚಿಯನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
 
ಇನ್ನು ಸಾನಿಯಾ ಕೂಡ ಟ್ವೀಟ್ ಮಾಡುವ ಮೂಲಕ ದಿಲ್ ವಾಲೇ ಟೀಮ್ ನೊಂದಿಗೆ ಕಳೆದ ಸಮಯ ಅತ್ಯಂತ ಸಂತಸದಿಂದ ಕೂಡಿತ್ತು ಅಂತಾ ಹೇಳಿದ್ದಾರೆ. ಈ ಹಿಂದೆ ಕೂಡ ಸಾನಿಯಾ ಶಾರುಕ್ ಖಾನ್ ಅವರನ್ನು ಹೈದ್ರಾಬಾದ್ ನಲ್ಲಿ ಭೇಟಿ ಮಾಡಿದ್ರು.

ವೆಬ್ದುನಿಯಾವನ್ನು ಓದಿ