ಸರ್ಜಾಪುರ ರಸ್ತೆಯಲ್ಲಿರುವ ಟೋಟಲ್ ಮಾಲ್ ನಲ್ಲಿನ ವಿಲೇಜ್ ರೆಸ್ಟೋರೆಂಟ್ ನಲ್ಲಿ ಈ ಹಾಡಿನ ಚಿತ್ರೀಕರಣ ಸಾಗುತ್ತಿದೆ. ಅನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಇರುವ ಈ ಚಿತ್ರದ ಹಾಡನ್ನು ಎಸ್ಕೆ ರಾವ್ ಅವರು ಚಿತ್ರೀಕರಣ ಮಾಡುತ್ತಿದ್ದಾರೆ. ಸಂಜನಾ ಸಹಕಲಾವಿದರ ಜೊತೆ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ.ವಿಹಾನ್ ಗೌಡ ಮುಖ್ಯ ಪಾತ್ರಧಾರಿಯಾಗಿರುವ ಈ ಚಿತ್ರದಲ್ಲಿ ಮನೋಜವ, ರಾಜು ತಾಳಿಕೋಟೆ ಮುಂತಾದವರು ಮುಖ್ಯಪಾತ್ರಧಾರಿಗಳಾಗಿದ್ದಾರೆ. ಗೌರೀಶ್ ಅಕ್ಕಿ ಅವರೇ ಇದರ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದನ್ನು ಗೌರೀಶ್ ಅಕ್ಕಿ ಸಿನಿಮಾಸ್ ಪತಾಕೆಯ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.