ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ಸಂಜನಾ ಗಲ್ರಾನಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೊಪಿಸುವ ಕೋರ್ಟ್ ತೀರ್ಮಾನವನ್ನು ಅವರ ಪರ ವಕೀಲರು ಆಕ್ಷೇಪಿಸಿದ್ದಾರೆ. ಈ ಸಂಬಂಧ ವಾದ ವಿವಾದ ನಡೆಯುತ್ತಿರುವ ಕಾರಣ ಕೋರ್ಟ್ ತೀರ್ಪು ಕೆಲವು ಕಾಲ ಮುಂದೂಡಿದೆ.
ಸಂಜನಾ ಸಿಸಿಬಿ ಕಸ್ಟಡಿ ಇಂದು ಅಂತ್ಯವಾಗಿತ್ತು. ಆದರೆ ಅವರ ಮೇಲಿನ ಆರೋಪವೇನು ಎಂಬುದನ್ನೇ ನಮಗೆ ಸಿಸಿಬಿ ಸ್ಪಷ್ಟವಾಗಿ ತಿಳಿಸಿಲ್ಲ. ಹೀಗಿರುವಾಗ ಅವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಬಾರದು ಎಂದು ಅವರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಾದ ವಿವಾದ ನಡೆಯುತ್ತಿದೆ.