ಶ್ರೀನಿವಾಸ ರಾಜು ನಿರ್ದೇಶನದ ನಾಟಿಕೋಳಿ ಸಿನಿಮಾದಲ್ಲಿ ಸಂಜನಾಗೂ ಅವಕಾಶ

ಸೋಮವಾರ, 20 ಏಪ್ರಿಲ್ 2015 (11:57 IST)
ಕನ್ನಡ ಚಿತ್ರರಂಗದ ತುಪ್ಪದ ಹುಡುಗಿ ರಾಗಿಣಿ. ಆಕೆಯ ಅಭಿನಯದ ಹೊಚ್ಚ ಹೊಸ ಚಿತ್ರ ನಾಟಿ ಕೋಳಿ.ಆ ಚಿತ್ರವನ್ನು  ವಿವಾದಗಳ ಸೃಷ್ಟಿಕರ್ತ ನಿರ್ದೇಶಕ ಶ್ರೀನಿವಾಸ ರಾಜು ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ತಾರಾಗಣ ಈಗ ದಿನೇದಿನೇ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಉಪೇಂದ್ರ ನಟನೆಯ ಶಿವಂ ಚಿತ್ರವನ್ನು ಶ್ರೀನಿವಾಸ ರಾಜು ನಿರ್ದೇಶನ ಮಾಡಿದ್ದರು. ಅದು ತನ್ನ ಶೀರ್ಷಿಕೆಯ ವಿಷಯದಲ್ಲಿ ಪಡೆದಷ್ಟು ಜನಾಕರ್ಷಣೆ ಬಿಡುಗಡೆಯ ಬಳಿಕ ಪಡೆಯಲಿಲ್ಲ. ದಂಡುಪಾಳ್ಯದಂತಹ ಚಿತ್ರ ನಿರ್ಮಿಸಿ, ಗೆದ್ದ ಶ್ರೀನಿವಾಸರಾಜು ಶಿವಂ ಮೂಲಕ ಸುದ್ದಿ ಮಾಡಿದರು.

ಈಗ ಅವರು ನಾಟಿ ಕೋಳಿಯನ್ನು ಕೈಗೆತ್ತಿಕೊಂಡಿದ್ದಾರೆ. ಆ ಚಿತ್ರದಲ್ಲಿ ನಟಿ ರಾಗಿಣಿ ಎರಡು ಶೇಡ್ ಗಳ ಮುಖ್ಯ ಭೂಮಿಕೆಯಲ್ಲಿದ್ದಾಳೆ. ಅದಾದ ನಂತರ ಅಷ್ಟೇ ಪ್ರಾಮುಖ್ಯತೆಯನ್ನು ಸಂಜನಾ ಗಲ್ರಾಣಿ ಪಡೆದುಕೊಳ್ಳುತ್ತಿದ್ದಾಳೆ. ನಿಮ್ಮ ಗೆಸ್ ಸರಿ ಪ್ರಿಯ ಓದುಗರೇ, ಸಂಜನಾ ಸಹ ನಾಟಿಕೋಳಿ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಂಡಿದ್ದಾಳೆ. ಇದರಲ್ಲಿ ಆಕೆ ಡ್ಯಾನ್ಸರ್ ಪಾತ್ರಧಾರಿಯಾಗಿದ್ದಾಳೆ.  
 
ಅಂದರೆ  ರಾಗಿಣಿ ಪಾತ್ರಕ್ಕಿರುವಷ್ಟೇ ಪ್ರಾಮುಖ್ಯತೆ ಸಂಜನಾ ಪಾತ್ರಕ್ಕೂ ಸಹಿತ ಇದೆ ಎನ್ನುವ ಮಾತನ್ನು ನಿರ್ದೇಶಕರು ಹೇಳಿದ್ದಾರೆ. ಅತ್ಯುತ್ತಮ ಪಾತ್ರವಾಗಿದ್ದು ಶ್ರೀನಿವಾಸ ರಾಜು ಅವರ ನಿರ್ದೇಶನ ಇದೆ ಎನ್ನುವ ಕಾರಣಕ್ಕೆ ಆಕೆ ಸಿನಿಮಾದಲ್ಲಿ ನಟಿಸಲು ಒಪ್ಪಿದಳಂತೆ. ಅದೇರೀತಿ ರಾಗಿಣಿಯ ಕಡೆಯಿಂದ ಶೇ. 100 ರಷ್ಟು ಉತ್ತಮ ಬಾಂಧವ್ಯ ಬಯಸುತ್ತಿದ್ದಾಳಂತೆ ವೃತ್ತಿಪರವಾಗಿ ಈ ಸಿಂಧಿ ಹೆಣ್ಣು ಮಗಳು. ಅದು ಸಾಧ್ಯವಾಗುತ್ತೆ ಬಿಡಿ ರಾಗಿಣಿ ಮತ್ತು ಸಂಜನಾ ಮೂಲತಃ ಉತ್ತರ ಭಾರತದ ಹೆಣ್ಣುಮಕ್ಕಳು ಆ ಅಂಶದಿಂದಾದರೂ ಉತ್ತಮ ಬಾಂಧವ್ಯ ಪಡೆಯಲು ಸಾಧ್ಯ ಎಂದೆನ್ನುತ್ತಿದ್ದಾರೆ ಸ್ಯಾಂಡಲ್ ವುಡ್ ಮಂದಿ. 

ವೆಬ್ದುನಿಯಾವನ್ನು ಓದಿ