ಐತಿಹಾಸಿಕ ಚಿತ್ರದಲ್ಲಿ ನಟಿಸಲು ಅವಕಾಶ ಪಡೆದ ಸಂಜನಾ

ಸೋಮವಾರ, 27 ಏಪ್ರಿಲ್ 2015 (09:54 IST)
ಸಂಜನಾ ಗಲ್ರಾಣಿ ಈಗ ಸಕತ್ ಬ್ಯುಸಿ  ಬ್ಯುಸಿ. ಆಕೆ ಪ್ರಸ್ತುತ ರಾಮ್ ಲೀಲಾ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಅದರ ಜೊತೆ ಜೊತೆಗೆ ಸಂಜನಾಗೆ ಐತಿಹಾಸಿಕ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಆದರೆ ಆ ಇತಿಹಾಸ ಕಥಾನಕ ಹೊಂದಿರುವ ಚಿತ್ರದ ಹೆಸರನ್ನು ಸಂಜನಾ ಮಾಧ್ಯಮಗಳಿಗೆ ಹೇಳಿಲ್ಲ. ಆಕೆ ತನ್ನ ಸಾಮಾಜಿಕ ಜಾಲತಾಣದ ಪೇಜ್ ನಲ್ಲಿ ಈ ಬಗ್ಗೆ ಹೇಳುತ್ತಾ ಅತ್ಯಂತ ಭಾರಿಯಾದ ಶೆಡ್ಯೂಲ್ ಗಳು. ರಾಮ ಲೀಲಾ ಹಾಗೂ ಹೊಸ ಐತಿಹಾಸ ಪ್ರಧಾನ ಕಥಾ ಹಂದರ ಹೊಂದಿರುವ ಚಿತ್ರಗಳು. 
ನಾನು ಮೈಲಾರಿ ಸೂಪರ್  ಸ್ಟಾರ್ ಚಿತ್ರದಲ್ಲಿ ನಟಿಸಲು ಸಹಿ ಹಾಕಿದ್ದೇನೆ ಎಂದು ಟ್ವೀಟಿಸಿದ್ದಾಳೆ. ಅಲ್ಲದೆ ಈಗ ರಾಮ್ ಲೀಲಾ ಶೂಟಿಂಗ್ ಮುಗಿಯಿತು, ಆದರೆ ಹೊಸ ಚಿತ್ರದ ಶೂಟಿಂಗ್ ಗೆಂದು ಶ್ರೀರಂಗಪಟ್ಟಣಕ್ಕೆ ಹೊರಟಿರುವೆ ಎಂದು ಸಹಿತ ಹೇಳಿ ಆಕೆಯ ಹೊಸ ಚಿತ್ರದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದ್ದಾಳೆ ಸಂಜನಾ.ಲೋಕ್ಯಂ ತೆಲುಗು ಚಿತ್ರದ ರೀಮೇಕ್ ಆಗಿರುವ ರಾಮ್ ಲೀಲಾ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹಾಗೂ ಅಮೂಲ್ಯ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ