ಪರಪ್ಪನ ಅಗ್ರಹಾರ ಸೇರುವ ಮೊದಲು ರಾಗಿಣಿಯನ್ನು ತಬ್ಬಿಕೊಂಡ ಸಂಜನಾ

ಮಂಗಳವಾರ, 15 ಸೆಪ್ಟಂಬರ್ 2020 (09:28 IST)
ಬೆಂಗಳೂರು: ಅನಿವಾರ್ಯವಾದರೆ ಶತ್ರುವೂ  ಮಿತ್ರನಾಗುತ್ತಾನೆ ಎನ್ನುವುದಕ್ಕೆ ರಾಗಿಣಿ-ಸಂಜನಾರೇ ಸಾಕ್ಷಿ. ಪರಸ್ಪರ ಕಿತ್ತಾಡುತ್ತಿದ್ದ ಸಂಜನಾ-ರಾಗಿಣಿ ಈಗ ಭಾರೀ ಫ್ರೆಂಡ್ಸ್ ಆಗಿದ್ದಾರೆ!


ಸಿಸಿಬಿ ವಶಕ್ಕೆ ಬಂದ ಮೊದಲ ದಿನವೇ ಸಂಜನಾ-ರಾಗಿಣಿ ನಡುವೆ ಕಿತ್ತಾಟವಾಗಿತ್ತು. ಆದರೆ ಅದಾದ ಬಳಿಕ ಇಬ್ಬರೂ ಒಂದಾಗಿದ್ದರು. ನಿನ್ನೆ ರಾಗಿಣಿಗೆ ನ್ಯಾಯಾಲಯ ಸೋಮವಾರದವರೆಗೆ ನ್ಯಾಯಾಂಗ ಬಂಧನ ವಿಧಿಸುತ್ತಿದ್ದಂತೇ ಪಕ್ಕದಲ್ಲಿದ್ದ ಸಂಜನಾ ಆಕೆಯನ್ನು ತಬ್ಬಿ ಸಂತೈಸಿ ಕಳುಹಿಸಿಕೊಟ್ಟಿದ್ದಾರೆ. ಇತ್ತ ಸಂಜನಾ ಕೂಡಾ ಎರಡು ದಿನಗಳ ಬಳಿಕ ನ್ಯಾಯಾಂಗ ಬಂಧನಕ್ಕೊಳಗಾಗುವ ಸಾಧ‍್ಯತೆಯಿದೆ. ಸದ್ಯಕ್ಕೆ ಅವರು ಸಿಸಿಬಿ ವಶದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ