ಶಿವಣ್ಣನ ಜೊತೆ ಸಂಜನಾ ಇನ್ ರಿಲೇಶನ್ ಶಿಪ್

ಶುಕ್ರವಾರ, 24 ಅಕ್ಟೋಬರ್ 2014 (10:29 IST)
ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ತನ್ನ ಬದುಕು ಕಾಣುತ್ತಿರುವ ಕನ್ನಡ ನಟಿ ಸಂಜನಾ ಗಲ್ರಾಣಿ. ಆಕೆ ಅಲ್ಲಿದ್ದರು ಸಹಾ ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಜೊತೆ ರಿಲೇಷನ್ ಶಿಪ್ ಹೊಂದಿದ್ದಾಳೆ. 

ಇದನ್ನು ಓದಿದಾಗ ನಿಮಗೆ ಬೇರೆ ರೀತಿಯ ಯೋಚನೆ ಬರುವುದು  ಸಹಜ. ಆದರೆ ಅವರಿಬ್ಬರ ಸಂಬಂಧ ಸಾಮಾನ್ಯವಾಗಿ ಫಿಲ್ಮಿ ದುನಿಯಾದಲ್ಲಿ ಇರುವಂತೆ ಇಲ್ಲ. ಅಂದರೆ ಇಬ್ಬರ ನಡುವೆ ಅಫೇರ್ ಇಲ್ಲ . ಬದಲಾಗಿ ಶಿವಣ್ಣನ  ಬಗ್ಗೆ ಸೋದರ ಪ್ರೀತಿ ಹೊಂದಿದ್ದಾಳೆ ಈ ಚೆಲುವೆ. ಅಲ್ಲದೆ ಆತನ ತಾಯಿ ಪಾರ್ವತಮ್ಮನವರನ್ನು ತನ್ನ ಸ್ವಂತ ತಾಯಿ ಎಂದು ತಿಳಿದಿದ್ದಾಳೆ ಈ ಭಾಮೆ. 
 
ಶಿವಣ್ಣನ ಜೊತೆಯಲ್ಲಿ ಆಕೆ ದೀಪಾವಳಿಯನ್ನು ಆಚರಿಸಿದಳು ಅದೂ ಸಿದ್ಧಾರ್ಥ್  ಚಿತ್ರತಂಡ ಜೊತೆ ಸೇರಿ. ಈ ಬಗ್ಗೆ ಟ್ವೀಟಿಸಿದ ಈ ಚೆಲುವೆ ದಿವಾಳಿ  ಸೆಲಬ್ರೇಟ್  ನ್ನು ಸಿದ್ಧಾರ್ಥ ಚಿತ್ರತಂಡ ಜೊತೆ ಮಾಡಿದೆ ಬೆಂಗಳೂರಿನಲ್ಲಿ . ಸಕತ್ ಖುಷಿಯಾಗಿ ಎಂಜಾಯ್ ಮಾಡಿ ನಾನು ಎಂದು ಹೇಳಿದ್ದಾಳೆ. ಅಲ್ಲದೆ ಈ ಸಂಭ್ರಮಕ್ಕೆ ಸಂಬಂಧಪಟ್ಟಂತೆ ಸಾಕ್ಷಿಯಾಗಿ ಅನೇಕ ಫೋಟೋಗಳನ್ನು ಪೋಸ್ಟ್ ಮಾಡಿರುವ ಸಂಜನಾ ಪಾರ್ವತಮ್ಮ ತನ್ನ ಅಮ್ಮ ಎಂದು ಹೇಳುತ್ತಾ, ಅಮ್ಮನ ಆಶೀರ್ವಾದ ಪಡೆಯಲು ಹೋಗಿದ್ದೆ ಎಂದು ಹೇಳಿದ್ದಾಳೆ. ಈಕೆಯ ಸ್ವಂತ ತಾಯಿ ಹಾಗೂ ಪಾರ್ವತಮ್ಮ ಇಬ್ಬರು ಸಹ ಒಟ್ಟಿಗೆ ಫೋಟೋ ತೆಗೆಸಿಕೊಂಡಿರುವ ಚಿತ್ರ  ಪೋಸ್ಟ್ ಮಾಡಿರುವುದಲ್ಲದೆ, ನಮ್ಮ ಹಿರಿಯ ಆಶೀರ್ವಾದದಿಂದ ನಾವು ಸದಾ ಉನ್ನತಿ ಕಾಣುತ್ತೇವೆ ಎಂದು ಸಹಿತ ಹೇಳಿದ್ದಾಳೆ. 

ವೆಬ್ದುನಿಯಾವನ್ನು ಓದಿ