ಈ ಸಂಕ್ರಾಂತಿ ಶಿವಣ್ಣ, ಕಿಚ್ಚ ಸುದೀಪ್ ಅಭಿಮಾನಿಗಳಿಗೆ ತುಂಬಾ ಸ್ಪೆಷಲ್

ಶನಿವಾರ, 11 ಜನವರಿ 2020 (09:12 IST)
ಬೆಂಗಳೂರು: ಸಂಕ್ರಾಂತಿಗೆ ಇನ್ನೇನು ಎರಡೇ ದಿನ ಬಾಕಿಯಿದ್ದು ಸಿನಿಮಾ ಚಟುವಟಿಕೆಗಳೂ ಜೋರಾಗಿಯೇ ಇದೆ. ಈ ಸಂಕ್ರಾಂತಿ ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿಮಾನಿಗಳಿಗಂತೂ ಸ್ಪೆಷಲ್ ಆಗಿರಲಿದೆ.


ಯಾಕೆಂದರೆ ಈ ಸಂಕ್ರಾಂತಿಗೆ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಮೋಷನ್ ಪೋಸ್ಟರ್ ಬಿಡುಗಡೆಯಾಗುತ್ತಿದೆ. ಸಂಜೆ 6 ಗಂಟೆಗೆ ಪೋಸ್ಟರ್ ಬಿಡುಗಡೆಯಾಗಲಿದ್ದು, ಕಿಚ್ಚನ ಲುಕ್ ಬಹಿರಂಗವಾಗಲಿದೆ.

ಇನ್ನು ಇದೇ ದಿನ ಸಂಜೆ 5 ಗಂಟೆಗೆ ಶಿವರಾಜ್ ಕುಮಾರ್ ಅಭಿನಯದ ದ್ರೋಣ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ಹೀಗಾಗಿ ಎರಡೂ ಸ್ಟಾರ್ ನಟರ ಅಭಿಮಾನಿಗಳಿಗೆ ಈ ದಿನ ಹಬ್ಬವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ