ಮಹೇಶ್ ಬಾಬು ಜೊತೆ ಸನ್ನಿ ಲಿಯೋನ್ ಸ್ಪೆಶಲ್ ಸಾಂಗ್

ಬುಧವಾರ, 28 ಜನವರಿ 2015 (10:47 IST)
ಪ್ರಿನ್ಸ್ ಮಹೇಶ್ ಬಾಬು ಅವರ ಮುಂದಿನ ತೆಲುಗು ಚಿತ್ರದ ಹೆಸರು ಶ್ರೀಮಂತುಡು. ಈ ಚಿತ್ರವನ್ನು ಕೊರಟಾಲ ಶಿವು ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಶರವೇಗದಿಂದ ಆಗುತ್ತಿದ್ದು, ಇದನ್ನು ಬೇಸಿಗೆಯ ಕಾಣಿಕೆಯಾಗಿ ಜನರಮುಂದೆ ತರುವ ಉತ್ಸಾಹದಲ್ಲಿ ಇದ್ದಾರೆ ಚಿತ್ರತಂಡ.  
ಈಗ ಈ ಚಿತ್ರಕ್ಕೆ ಸಂಬಂಧ ಪಟ್ಟಂತೆ ಅನೇಕ ಸಂಗತಿಗಳು ಕೇಳಿ ಬರುತ್ತಿವೆ, ಆದರೆ ಇತ್ತೀಚಿನ ಹಾಟ್ ಹಾಟ್  ನ್ಯೂಸ್ ಅಂದ್ರೆ ಪ್ರಿನ್ಸ್ ಚಿತ್ರದಲ್ಲಿ ಮಾದಕ ತಾರೆ ಕೆನಡಿಯನ್ ಮೂಲದ ಸನ್ನಿ ಲಿಯೋನ್ ನಟಿಸುತ್ತಿರುವುದು! ಶ್ರೀಮಂತುಡು ಚಿತ್ರದಲ್ಲಿ ವಿಶೇಷ ಹಾಡಿಗೆ ಸನ್ನಿ ಹೆಜ್ಜೆ ಹಾಕುತ್ತಿದ್ದಾಳೆ. ಅದರ ಬಗ್ಗೆ ಮಾತು ಕಥೆ ನಡೆದಿದ್ದು, ಅದಕ್ಕೆ ಸನ್ನಿ ಕಡೆಯಿಂದ ಹಸಿರು ನಿಶಾನೆ ಸಿಕ್ಕಿದೆ ಎನ್ನುವುದು ಈಗ ಟಾಲಿವುಡ್ ನಲ್ಲಿ ಕೇಳಿ ಬಂದ ಸಂಗತಿಯಾಗಿದೆ. 
 
ಇವರಿಬ್ಬರ ಈ  ವಿಶೇಷ ಹಾಡನ್ನು ಫೆಬ್ರವರಿ ತಿಂಗಳಲ್ಲಿ ಚಿತ್ರೀಕರಣ ಮಾಡಲಾಗುತ್ತದೆಯಂತೆ. ಪ್ರಸ್ತುತ ಈ ಚೆಲುವೆ ಮಂಚು ಮನೋಜ್ ಅವರ ಜೊತೆ ಕರೆಂಟ್ ತೀಗ ಚಿತ್ರದಲ್ಲಿ ಅಭಿನಯಿಸುತ್ತಿದ್ದಾಳೆ. ಅಲ್ಲದೆ ಕನ್ನಡದಲ್ಲಿ ಜೋಗಿ ಪ್ರೇಂ ಅವರ ನಟನೆಯ ಡಿಕೆ   ಕುಣಿದು ಹೋಗಿಯಾಗಿದೆ. ಈಗ ಪ್ರಿನ್ಸ್ ಜೊತೆ ಅಭಿನಯಿಸಲು ಸಿದ್ಧ ಆಗಿದ್ದಾಳೆ ಚೆಲುವೆ. ಒಟ್ಟಾರೆ ಉತ್ತರದವರು ನೀಡದ ಅವಕಾಶಗಳನ್ನು ದಕ್ಷಿಣದವರು ನೀಡುತ್ತಿದ್ದಾರೆ.  

ವೆಬ್ದುನಿಯಾವನ್ನು ಓದಿ