ಸನ್ನಿ ಲಿಯೋನ್ ನಿಜ ಬದುಕು ಸೆನ್ಸಾರ್‌ನಲ್ಲಿ ಓಕೆ ಆಗುತ್ತದೆಯಂತೆ!

ಶುಕ್ರವಾರ, 13 ಮಾರ್ಚ್ 2015 (10:26 IST)
ಈವೆರಗೂ ಭಾರತೀಯ ಚಲನಚಿತ್ರರಂಗದಲ್ಲಿ ವಯಸ್ಕರಿಗೆ ಸಂಬಂಧಪಟ್ಟ ಸಂಗತಿಗಳು ಒಂದು ಮಿತಿಯಲ್ಲಿತ್ತು .ಆದರೆ ಈಗ ಅವುಗಳು ಅಳತೆ ಮೀರುತ್ತಿದೆ. ಸಂಪೂರ್ಣವಾಗಿ ವಯಸ್ಕರಿಗೆ ಸಂಬಂಧ ಪಟ್ಟ ಸನ್ನಿವೇಶಗಳೇ ಹೆಚ್ಚಾಗಿದ್ದು, ಸಂಪೂರ್ಣ ಬ್ಲೂ ಚಿತ್ರವಾಗಿ ಪರಿಣಮಿಸಿದೆ ಸಿನಿಮಾಗಳು ಎನ್ನುವ ಮಾತಿಗೆ ಸಮ್ಮತಿ ಮುದ್ರೆ ತೋರಿದ್ದಾರೆ ಬಾಲಿವುಡ್ ಸಿನಿಮಾದವರು.
ಈ ಬಗ್ಗೆ ವಿವರ ಪಡೆಯಲು ಹೊರಟಾಗ ನೆನಪಾಗುವುದು ಸನ್ನಿ ಲಿಯೋನ್. ಜಿಸ್ಮ್2 ಚಿತ್ರಕ್ಕೆಂದು ಭಾರತಕ್ಕೆ ಬಂದ ಈ ನಟಿ ಬಿಗ್ ಬಾಸ್ ಮೂಲಕ ಜನರಿಗೆ ಪರಿಚಿತಳಾದಳು. ಅದಾದ ಬಳಿಕ ಜಿಸ್ಮ್ 2 ದಲ್ಲಿ ನಟಿಸಿ ಇನ್ನೂ ಹಲವು ಚಿತ್ರಗಳಲ್ಲೂ ಸಹಿತ ಅಭಿನಯಿಸಿ ಈಗ ಅನೇಕ ಅವಕಾಶಗಳನ್ನು ಹೊಂದಿದ್ದಾಳೆ. ಅಷ್ಟೇ ಅಲ್ಲದೆ ಕನ್ನಡ . ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತನ್ನದೇ ಆದ ಛಾಪು ಒತ್ತಿರುವ ಈ ನಟಿ  ಕಂಡ್ರೆ ಭಾರತೀಯ ಪಡ್ಡೆ ಹಳೆ ಪಡ್ಡೆ ಹೃದಯಗಳಿಗೆ ಕ್ರೇಜು! ಈ ಮೊದಲು ನಾವು ಈಕೆ ತನ್ನ ಜೀವನ ಚರಿತ್ರೆ ಕಥೆ ಇರುವ ಸಿನಿಮಾದಲ್ಲಿ ನಟಿಸುತ್ತಾಳೆ ಎಂದು ಹೇಳಿದ್ದೆವು. ಈಗ ಬಂದಿರುವ ಸುದ್ದಿ ಪ್ರಕಾರ ಆಕೆ ಆ ಚಿತ್ರದಲ್ಲಿ ನಟಿಸಲು ಸಂಪೂರ್ಣವಾಗಿ ಒಪ್ಪಿಗೆ ನೀಡಿದ್ದಾಳಂತೆ. ತಾನ್ಯಾಕೆ ಆ ರಂಗ ಆಯ್ಕೆ ಮಾಡಿಕೊಂಡೆ, ಅದರ ಹಿಂದಿನ ಕಥೆ ಏನು ಹೀಗೆ ಹತ್ತು ಹಲವಾರು ಅಂಶಗಳನ್ನು ಒಳಗೊಂಡ ಚಿತ್ರವಾಗಿದ್ದು ಸನ್ನಿ ಈಗ ಅದರಲ್ಲಿ ಮುಖ್ಯ ಪಾತ್ರಧಾರಿ ಆಗಿದ್ದಾಳೆ. 
 
ಈ ಚಿತ್ರವನ್ನು ದಿಲೀಪ್ ಮೆಹತ ಅವರು ನಿರ್ದೇಶನ ಮಾಡುತ್ತಿದ್ದಾರೆ. ತಾನು ಈ ಚಿತ್ರದಲ್ಲಿ ನಟಿಸಲು ಕಾಲ್ಶೀಟ್ ಸಹ ನೀಡಿದ್ದಾಳಂತೆ. ಈ ಮುಖಾಂತರ ತನ್ನ ಗತ ಬದುಕಿನ ಬಗ್ಗೆ ಜನರಿಗೆ ತೋರಿಸಲು ಸನ್ನದ್ಧಳಾಗಿದ್ದಾಳೆ ಈಕೆ. ಈ ಚಿತ್ರ ಸೆನ್ಸಾರ್ ನವರಿಂದ ಯಾವುದೇ ರೀತಿಯ ಕಟ್ ಆಗದೆ ಪ್ರಸಾರ ಆಗುತ್ತದೆ ಎಂದು ಚಿತ್ರದ ಕೆಲಸ ಆರಂಭವಾಗುವ ಮುನ್ನವೇ ಹೇಳಿದ್ದಾರೆ ನಿರ್ದೇಶಕರು. 
 

ವೆಬ್ದುನಿಯಾವನ್ನು ಓದಿ