ಅಧ್ಯಕ್ಷ ಚಿತ್ರದ ವಿವಾದಿತ ದೃಶ್ಯಗಳಿಗೆ ಕತ್ತರಿ: ಸೆನ್ಸಾರ್ ಮಂಡಳಿ ಕೋಪ

ಸೋಮವಾರ, 18 ಆಗಸ್ಟ್ 2014 (10:57 IST)
ಅಧ್ಯಕ್ಷ  ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಕೊಟ್ಟ ಮೇಲೆ ಕೆಲವು ದೃಶ್ಯಗಳನ್ನು ಕತ್ತರಿಸಿದ್ದು ಸೆನ್ಸಾರ್ ಮಂಡಳಿಯ ಕೋಪಕ್ಕೆ ಗುರಿಯಾಗಿದೆ.  ನಿಯಮ ಉಲ್ಲಂಘಿಸಿದ ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿ ಎಚ್ಚರಿಕೆ ನೀಡಿದೆ. ಶ್ರೀಕೃಷ್ಣನ ಕುರಿತು ಅವಹೇಳನಕಾರಿ ದೃಶ್ಯಗಳಿವೆಯೆಂದು ಹಿಂದು ಜಾಗರಣ ವೇದಿಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಚಿತ್ರದ ಹಾಡಿನಲ್ಲಿರುವ ಕೆಲವು ಅವಹೇಳನಕಾರಿ ದೃಶ್ಯಗಳನ್ನು ಕತ್ತರಿಸಬೇಕೆಂದು ಅದು ಸೆನ್ಸಾರ್ ಮಂಡಳಿಗೆ ಮನವಿ ಸಲ್ಲಿಸಿತ್ತು.

ಆದರೆ ಹಿಂದೂ ಜಾಗರಣ ವೇದಿಕೆ ಮನವಿಯಲ್ಲಿ ಯಾವುದೇ ಸತ್ಯಾಂಶವಿಲ್ಲ, ದುರುದ್ದೇಶಪೂರಿತವಾಗಿದೆ ಎಂದು ತೀರ್ಮಾನಿಸಿ ಕತ್ತರಿಸಲು ಅವಕಾಶ ನೀಡಲಿಲ್ಲ ಎಂದು ಸೆನ್ಸಾರ್ ಮಂಡಳಿ ಅಧಿಕಾರಿ ನಾಗೇಂದ್ರ ಸ್ವಾಮಿ ಹೇಳಿದ್ದಾರೆ.  ಆದರೆ  ಚಿತ್ರದ ನಿರ್ಮಾಪಕರು ಸೆನ್ಸಾರ್ ಅನುಮತಿ ಪಡೆದ ಮೇಲೆ ಆಕ್ಷೇಪಾರ್ಹ ದೃಶ್ಯಗಳನ್ನು ಕತ್ತರಿಸಿದ್ದು ಸೆನ್ಸಾರ್ ಮಂಡಳಿ ಕೋಪಕ್ಕೆ ಗುರಿಯಾಗಿದೆ.. ಕೋರ್ಟ್ ಆದೇಶ ನೀಡಿದ್ದರಿಂದ ತಾವು ವಿವಾದಿತ ದೃಶ್ಯಗಳನ್ನು ಕತ್ತರಿಸಿದ್ದಾಗಿ ನಿರ್ಮಾಪಕ ಗಂಗಾಧರ್ ಹೇಳಿದ್ದಾರೆ.

 ಆದರೆ ಆಕ್ಷೇಪಾರ್ಹ ದೃಶ್ಯ ಕತ್ತರಿಸುವಂತೆ ಕೋರ್ಟ್‌ನಿಂದ ತಮಗೆ ಯಾವುದೇ ಸೂಚನೆ ಬಂದಿಲ್ಲ ಎಂದು ನಾಗೇಂದ್ರ ಸ್ವಾಮಿ ಹೇಳಿದ್ದಾರೆ. ನಿಯಮ ಉಲ್ಲಂಘಿಸಿದ ಚಿತ್ರತಂಡಕ್ಕೆ ನೆನ್ಸಾರ್ ಮಂಡಳಿ  ಎಚ್ಚರಿಕೆ ನೀಡಿದ ಮೇಲೆ  ಯಾವುದೇ ದೃಶ್ಯಗಳಿಗೆ ಕತ್ತರಿಯಿಲ್ಲದೇ ಪ್ರದರ್ಶನ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ