ಗಯಾಳಿ ಪಾತ್ರದಲ್ಲಿ ಅಭಿನಯಿಸಲಿರುವ ಸೆಕ್ಸಿ ಸುಕೃತಾ ವಾಗ್ಲೆ

ಸೋಮವಾರ, 2 ಮಾರ್ಚ್ 2015 (10:09 IST)
ಪೂರ್ಣ ಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕಥೆ  ಕಿರಗೂರಿನ ಗಯ್ಯಾಳಿಗಳು. ಇದನ್ನು ಕನ್ನಡದ ನಿರ್ದೇಶಕಿ ಸುಮನ್ ಕಿತ್ತೂರ್ ರವರು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ಆಕೆಯ ನಿರ್ದೇಶನದ ಎದೆಗಾರಿಕೆ ಚಿತ್ರದ ನಿರ್ದೇಶನಕ್ಕೆಂದು ರಾಜ್ಯ ಪ್ರಶಸ್ತಿ ಪಡೆದಿದ್ದರು. ಈಗ ತೇಜಸ್ವಿ ಅವರ ಕಾದಂಬರಿ ಕೈಗೆ ಎತ್ತಿಕೊಂಡಿದ್ದಾರೆ.
ಈಗಾಗಲಿ ಗಯ್ಯಾಳಿಗಳ ಗುಂಪಿಗೆ ಶ್ವೇತ ಶ್ರೀವಾತ್ಸವ್ ಅವರು ಸೇರ್ಪಡೆ ಆಗಿ ಮುಖ್ಯ ಗಯ್ಯಾಳಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ.ಆಕೆಯ ಜೊತೆಗೆ ಸೋನು ಹಾಗೂ ಸುಕೃತ ವಾಗ್ಲೆ ಸಹಿತ ಸೇರ್ಪಡೆ ಆಗಿದ್ದಾರೆ. ಕಿಶೋರ್ ಈ ಗುಂಪಿಗೆ ಸೇರ್ಪಡೆ ಆಗಿದ್ದಾರೆ. ಅಚ್ಯುತ್ ಕುಮಾರ್ ಅವರು ಪ್ರಧಾನ ಭೂಮಿಕೆಯಲ್ಲಿದ್ದಾರೆ.
 
ಈ ಚಿತ್ರದಲ್ಲಿ ಸುಕೃತಾಗೆ ಖಂಡಿತ ರಾಜ್ಯ ಚಲನ ಚಿತ್ರ ಪ್ರಶಸ್ತಿ ಸಿಕ್ಕೇ ಸಿಗುತ್ತದೆ ಎನ್ನುವ ಭವಿಷ್ಯ ನುಡಿದಿದ್ದಾರೆ ಸುಮನ್ ಕಿತ್ತೂರ್. ಈ ಚಿತ್ರವನ್ನು ಮೇ ತಿಂಗಳಿಂದ ಆರಂಭಿಸುತ್ತಾರಂತೆ. ಇದಾದ ಬಳಿಕ ಸುಮನ್ ಕಿತ್ತೂರ್ ಕೃಷ್ಣೆ ಗೌಡನ ಆನೆ ಯನ್ನು ಹಿರಿತೆರೆಗೆ ತರಲಿದ್ದಾರೆ. ಈಗಾಗಲೇ ಈ ಬಗ್ಗೆ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರು ಸಮ್ಮತಿ ಮುದ್ರೆ ನೀಡಿದ್ದಾರಂತೆ.
 
ತಬರನ ಕಥೆ, ಅಬಚೂರಿನ ಪೋಸ್ಟಾಫೀಸ್, ಕುಬಿ ಮತ್ತು ಇಯಾಲ  ಚಿತ್ರಗಳು ಈಗಾಗಲೇ ತೆರೆ ಕಂಡಿವೆ. ಈಗ ಕಿರಗೂರಿನ ಗಯ್ಯಾಳಿಗಳು ತೆರೆ ಕಾಣಲು ಸಿದ್ಧತೆ ನಡೆಸಿದ್ದಾಳೆ. ಈ ಚಿತ್ರಕ್ಕೆ ಲುಸಿಯಾ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ