ಭಾವಿ ಪತ್ನಿ ಮೀರಾ ರಾಜಪೂತ್‌ಗೆ 23 ಲಕ್ಷ ರೂ. ಉಂಗುರ ಉಡುಗೊರೆಯಾಗಿ ನೀಡಿದ ಶಾಹೀದ್ ಕಪೂರ್

ಗುರುವಾರ, 21 ಮೇ 2015 (17:31 IST)
ಹೈದರ್ ಚಿತ್ರದ ಯಶಸ್ವಿನ ಅಲೆಯಲ್ಲಿ ತೇಲುತ್ತಿರುವ ಬಾಲಿವುಡ್ ನಟ ಶಾಹೀದ್ ಖಾನ್, ತಮ್ಮ ಭಾವಿಪತ್ನಿ ಮೀರಾ ರಾಜಪೂತ್‌ಗೆ 23 ಲಕ್ಷ ರೂಪಾಯಿಗಳ ಮೊತ್ತದ ಉಡುಗೊರೆ ನೀಡಿದ್ದಾರೆ.  
 
ಪಂಜಾಬಿ ಸಂಪ್ರದಾಯದಂತೆ ಇಂದು ನಡೆದ ನಿಶ್ಚಿತಾರ್ಥದ ಸಂದರ್ಭದಲ್ಲಿ ಶಾಹೀದ್ ಕಪೂರ್, ತಮ್ಮ ಭಾವಿಪತ್ನಿ ಮೀರಾಳಿಗೆ ಇಷ್ಟವಾಗುವ 23 ಲಕ್ಷ ರೂ. ಮೌಲ್ಯದ ಉಂಗುರ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. 
 
ಕೆಲ ವರ್ಷಗಳ ಹಿಂದೆ ಕರೀನಾ ಕಪೂರ್ ಮತ್ತು ಪ್ರಿಯಾಂಕಾ ಚೋಪ್ರಾಳೊಂದಿಗೆ ಡೇಟಿಂಗ್ ನಡೆಸಿದ್ದ ಶಾಹೀದ್, ಕೊನೆಗೂ ಮೀರಾ ರಾಜಪೂತ್ ಕೈಹಿಡಿಯಲು ನಿರ್ಧರಿಸಿದ್ದಾರೆ.  
 
ಶಾಹೀದ್ ಕಪೂರ್, ಮೀರಾ ರಾಜಪೂತ್‌ಳೊಂದಿಗೆ ವಿವಾಹವಾಗುತ್ತಿರುವುದು ಅವರ ಮಹಿಳಾ ಅಭಿಮಾನಿಗಳ ಹೃದಯಗಳಿಗೆ ಕಿಚ್ಚು ಹಚ್ಚಿದಂತಾಗಿದೆ. 
 

ವೆಬ್ದುನಿಯಾವನ್ನು ಓದಿ