ಹಿಂದಿಗೆ ರಿಮೇಕ್ ಆಗುತ್ತಾ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ

ಮಂಗಳವಾರ, 12 ಜುಲೈ 2016 (09:00 IST)
ಮೊನ್ನೆ ಮೊನ್ನೆ ತಾನೇ ನಟ ಪ್ರಕಾಶ್ ರೈ ಅವರು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾವನ್ನು ನಾನು ತಮಿಳು ಹಾಗೂ ತೆಲುಗು ಭಾಷೆಗೆ ರಿಮೇಕ್ ಮಾಡುತ್ತೇನೆ ಅಂತಾ ಹೇಳಿದ್ದರು. ಅಲ್ಲದೇ ನಿರ್ಮಾಪಕರ ಬಳಿ ಮಾತನಾಡಿ ತೆಲುಗು, ತಮಿಳಿಗೆ ರಿಮೇಕ್ ಮಾಡಲು ರೈಟ್ಸ್ ಕೂಡ ಖರೀದಿಸಿದ್ದಾರೆ. ಇನ್ನು ತೆಲುಗು, ತಮಿಳಿನಲ್ಲಿ ಪ್ರಕಾಶ್ ರೈ ಅವರೇ ನಿರ್ಮಿಸಲಿದ್ದು, ಅನಂತನಾಗ್ ಅವರು ಕನ್ನಡದಲ್ಲಿ ನಿರ್ವಹಿಸಿರುವ ಪಾತ್ರವನ್ನು ರೈ ಅವರೇ ನಿರ್ವಹಿಸಲಿದ್ದಾರೆ ಅಂತಾ ಅವರೇ ಟ್ವಿಟರ್ ಮೂಲಕ ಹೇಳಿಕೊಂಡಿದ್ದರು.ಆದ್ರೀಗ ಮತ್ತೊಂದು ಸಂತೋಷದ ವಿಚಾರ ಹೊರ ಬಂದಿದೆ.


 
ಆದ್ರೆ ಇದೀಗ ಕೇಳಿ ಬರುತ್ತಿರುವ ಸಂತೋಷದ ಸುದ್ದಿ ಅಂದ್ರೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹಿಂದಿಗೆ ರಿಮೇಕ್ ಆಗುತ್ತಿದೆಯಂತೆ. ರಕ್ಷಿತ್ ಶೆಟ್ಟಿ ಅವರು ಕನ್ನಡ ದಲ್ಲಿ ನಿರ್ವಹಿಸಿದ ಪಾತ್ರವನ್ನು ಹಿಂದಿಯಲ್ಲಿ ಶಾಹೀದ್ ಕಪೂರ್ ಅವರು ನಿರ್ವಹಿಸಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.ಅಂದ್ಹಾಗೆ ನಿರ್ನಾಪಕ ಬೋನಿ ಕಪೂರ್ ಅವರು ಸುಮಾರು 50 ಲಕ್ಷ ರೂಪಾಯಿಗಳನ್ನು ನೀಡಿ ಸಿನಿಮಾದ ರೈಟ್ಸ್ ನ್ನು ಈಗಾಗಲೇ ಪಡೆದುಕೊಂಡಿದ್ದಾರೆ ಅಂತಾ ಹೇಳಲಾಗುತ್ತಿದೆ.ಅಂದ್ಹಾಗೆ ಅನಂತ್ ನಾಗ್ ಅವರು ಮಡದ ಪಾತ್ರವನ್ನುಅನುಪಮ್ ಖೇರ್ ಅವರು ಮಾಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
 
ಕಳೆದುಹೋಗುವ ತಂದೆಯನ್ನು ಹುಡುಕುವ ಕಥಾಹಂದರವಿರುವ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮಗನಾಗಿ ಹಾಗೇ ಅನಂತ್ ನಾಗ್ ಅವರು ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಭಾವನಾತ್ಮಕ ಸಂಬಂಧವೊಂದರ ಮೇಲೆ ಹೆಣೆದಿರುವ ಈ ಸಿನಿಮಾದ ಕಥೆ ಕನ್ನಡಾಭಿಮಾನಿಗಳಿಂದ ಭರ್ಜರಿ ಪ್ರಶಂಸೆ ಗಿಟ್ಟಿಕೊಂಡಿದೆ. ಹಿಂದಿಯಲ್ಲಿ ಹೇಗೆ ಬರುತ್ತೋ ಕಾದು ನೋಡ್ಬೇಕು.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ