ಬಿಡುಗಡೆಯ ಹಾದಿಯಲ್ಲಿ ಶರಣ್ ಅಭಿನಯದ ರಾಜರಾಜೇಂದ್ರ

ಮಂಗಳವಾರ, 27 ಜನವರಿ 2015 (11:12 IST)
ಶರಣ್ ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಜ ರಾಜೇಂದ್ರ  ಫೆಬ್ರವರಿ ತಿಂಗಳ 6  ನೇ ತಾರೀಖಿನಂದು ಬಿಡುಗಡೆ ಆಗಲಿದೆ. ಈ ಚಿತ್ರ ಶರಣ್ ಹುಟ್ಟು ಹಬ್ಬದ ಸಮಯದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ರಾಜ ರಾಜೇಂದ್ರ ಚಿತ್ರವನ್ನು  ಪೋನ್ ಕುಮಾರ್ ಅವರು ನಿರ್ದೇಶಿಸಿದ್ದಾರೆ ಹಾಗೂ ಉದಯ್ ಮೆಹತ ಅವರು ನಿರ್ಮಿಸಿದ್ದಾರೆ. 
ಈ ಚಿತ್ರದಲ್ಲಿ ಶರಣ್ ಅವರ ಜೊತೆಯಾಗಿದ್ದಾರೆ ಇಷಿಕ ದತ್. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದ ಈ ಚಿತ್ರದ ಹಾಡುಗಳು ಸಿಕ್ಕಾಪಟ್ಟೆ  ಪಾಪ್ಯುಲರ್ ಆಗಿದೆ. ಶರಣ್ ಅವರು ಈ ಚಿತ್ರದಲ್ಲಿ ಹಾಡುವುದರ ಮೂಲಕ ತಾವು ಹಾಡುಗಾರ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಈ ಹಾಡನ್ನು ಹಿರಿಯ ಗಾಯಕಿ ಮಂಜುಳಾ ಗುರುರಾಜ್ ಅವರ ಜೊತೆ ಹಾಡಿದ್ದಾರೆ ಶರಣ್. ಈ ಡ್ಯುಯೆಟ್ ನ್ನು ಬರೆದವರು ಯೋಗರಾಜ್ ಭಟ್.  
 

ವೆಬ್ದುನಿಯಾವನ್ನು ಓದಿ