ಒಂದು ಕ್ಷೇತ್ರದಲ್ಲಿ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಕೆಲಸ ಮಾಡುತ್ತಾ ಬದುಕನ್ನು ಕಂಡು ಕೊಂಡಾತ ಇಪ್ಪತ್ತೈದು ವರ್ಷಗಳ ಬಳಿಕ ತನ್ನ ಶೈಲಿಯಲ್ಲಿ ಬದಲಾವಣೆ, ಮಾಡಿಕೊಳ್ಳ ಬೇಕಾಗಿ ಬಂದರೆ ? ಅದರಲ್ಲೂ ಚಿತ್ರರಂಗದ ಟಾಪ್ ಹೀರೋಗೆ ಆ ರೀತಿಯ ಪರಿಸ್ಥಿತಿ ಎದುರಾದರೆ ? ಈಗ ಅಂತಹ ಒಂದು ಪರಿಸ್ಥಿತಿ ಎದುರಿಸುತ್ತಿದ್ದಾರೆ ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್. ಅದಕ್ಕಾಗಿ ಸಾಕಷ್ಟು ಕಷ್ಟ ಪಡುವಂತಾಗಿದೆ ಅವರಿಗೆ.
ಮನೀಶ್ ಶರ್ಮ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಫ್ಯಾನ್ ಎನ್ನುವ ಚಿತ್ರಕ್ಕಾಗಿ ಶಾರೂಖ್ ಖಾನ್ ಈ ರೀತಿಯ ಪಡಿಪಾಟಲು ಪಡುತ್ತಿದ್ದಾರಂತೆ. ಈ ಚಿತ್ರದಲ್ಲಿ ಕೆಲಸ ಮಾಡುತ್ತಿರುವವರೆಲ್ಲರು ಆತನ ಫ್ಯಾನ್ಗಳೇ ಆಗಿದ್ದಾರೆ. ಆದ್ದರಿಂದ ಆತ ಯಾವುದೇ ಸನ್ನಿವೇಶದಲ್ಲಿ ನಟಿಸಿದರೂ ಸಹಿತ ಈ ಮೊದಲು ಅಂತಹ ಪಾತ್ರ, ನಟನಾ ಶೈಲಿ ಮಾಡಿರುವುದಾಗಿ ಹೇಳುತ್ತಾ ಬೇಡ ಬೇಡ ಎಂದು ಅಡ್ಡಗಾಲು ಹಾಕುತ್ತಿದ್ದಾರೆ. ಈಗಾಗಲೇ ನೀವು ಆ ರೀತಿ ಮಾಡಿದ್ದಾಗಿದೆ, ಹೊಸದಾಗಿ ಮಾಡೋಣ ಎಂದು ಹೇಳುತ್ತಿದ್ದಾರೆ.
ಆದರೆ ಚಿಕ್ಕವರು, ಯುವಕರು ನೀಡಿದ ಸಲಹೆಗಳನ್ನು ನಾನು ತಪ್ಪದೆ ಅನುಸರಿಸುತ್ತೇನೆ ಎಂದಿದ್ದಾರೆ ಶಾರೂಖ್ ಖಾನ್. ಮನೀಶ್ ಶರ್ಮಾ, ರಾಹುಲ್ ಧೋಲಾಕಿಯರಂತಹ ಯುವ ನಿರ್ದೇಶಕರ ಜೊತೆ ಕೆಲಸ ಮಾಡುವಾಗ ಹೊಸ ಪ್ರಪಂಚಕ್ಕೆ ಬಂದಂಗೆ ಅನ್ನಿಸುತ್ತಿದೆ ಎಂದಿದ್ದಾರೆ. ದ್ವಿಪಾತ್ರ ಇರುವುದರಿಂದ ಇದರಲ್ಲಿ ಇಬ್ಬರು ಹೊಸ ಶಾರೂಖ್ ಖಾನ್ ಅವರನ್ನು ಕಾಣುವ ಸೌಭಾಗ್ಯ ಅವರ ಅಭಿಮಾನಿಗಳಿಗೆ!