ಮಗಳಿಗಾಗಿ ಸ್ಪೆಶಲ್ ಮೆಸೇಜ್ ಮಾಡಿದ ಶಾರುಖ್

ಗುರುವಾರ, 3 ಸೆಪ್ಟಂಬರ್ 2015 (09:31 IST)
ಶಾರುಖ್ ಖಾನ್ ಅವರಿಗೆ ತಮ್ಮ ಮಕ್ಕಳೆಂದ್ರೆ ತುಂಬಾ ಪ್ರೀತಿ. ಅವರ ಜೀವನದಲ್ಲಿ ಅವರು ತಮ್ಮ ಮೂವರು ಮಕ್ಕಳಿಗೂ ವಿಶೇಷ ಸ್ಥಾನಮಾನ ನೀಡಿದ್ದಾರೆ. ಅದರಲ್ಲೂ ಶಾರುಖ್ ಗೆ ಮಗಳು ಸುಹಾನಾ ಅಂದ್ರೆ ಕೊಂಚ ಜಾಸ್ತಿಯೇ ಪ್ರೀತಿ. ಆರ್ಯನ್ ಹಾಗೂ ಅಬ್ ರಾಮ್ ಗೆ ಹೋಲಿಸಿದ್ರೆ ಸುಹಾನಾಗೆ ಅಪ್ಪನ ಜೊತೆ ಒಡನಾಟ ತುಸು ಜಾಸ್ತಿ. ಅದು ನಿಜ ಅನ್ನೋದು ಈಗ ಪ್ರೂ ಆಗಿದೆ.
ಸದ್ಯ ಶಾರುಖ್ ತಮ್ಮ ದಿಲ್ ವಾಲೇ ಸಿನಿಮಾದ ಶೂಟಿಂಗ್ ಗಾಗಿ ಮನೆಯಿಂದ ದೂರವಿದ್ದಾರೆ. ಐಸ್ ಲ್ಯಾಂಡ್‌ನಲ್ಲಿ ಶಾರುಖ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ಸಿನಿಮಾ ಚಿತ್ರೀಕರಣಕ್ಕಾಗಿ ಅವರು ಮನೆಯಿಂದ ದೂರವಿರೋದರಿಂದ ಮಗಳು ಸುಹಾನಾಳನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಅಲ್ಲದೇ ಈ ಬಗ್ಗೆ ಟ್ವಿಟರ್‌ನಲ್ಲಿ ಮೆಸೇಜ್ ಮಾಡಿರುವ ಶಾರುಖ್, ನಿನ್ನ ಪುಟ್ಟ ಹೃದಯ ನನ್ನ ಹೃದಯದಲ್ಲಿದೆ ಎಂದಿದ್ದಾರೆ.
 
ಶಾರುಖ್ ಖಾನ್ ಅವರ ಈ ಮೆಸೇಜ್ ನೋಡಿದ್ರೆ ಅವರಿಗೆ ಮಗಳಂದ್ರೆ ಎಷ್ಟು ಪ್ರೀತಿ ಅನ್ನೋದು ಗೊತ್ತಾಗುತ್ತೆ. ಸದ್ಯ ದಿಲ್ ವಾಲೇ ಸಿನಿಮಾದಲ್ಲಿ ಬ್ಯುಸಿಯಾಗಿರುವ ಶಾರುಖ್, ಶೀಘ್ರವೇ ಶೂಟಿಂಗ್ ಮುಗಿಸಿ ಸ್ವದೇಶಕ್ಕೆ ವಾಪಸ್ಸಾಗಲಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್‌ಗೆ ಕಾಜೋಲ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ