ಶಾರುಖ್ ಖಾನ್ ಒಬ್ಬ ಮಹೋನ್ನತ ತಂದೆ: ವರುಣ್ ಧವನ್

ಸೋಮವಾರ, 2 ನವೆಂಬರ್ 2015 (12:41 IST)
ಶಾರುಖ್ ಖಾನ್ ತಮ್ಮ ಸಿನಿಮಾಗಳು, ಕೆರಿಯರ್ ಬಗ್ಗೆ ಎಷ್ಟು ಮಾತನಾಡುತ್ತಾರೋ ಅದಕ್ಕಿಂತ ಹೆಚ್ಚಾಗಿ ಅವರು ಮಕ್ಕಳ ಬಗ್ಗೆ ಮಾತನಾಡುತ್ತಾರೆ. ಪದೇ ಪದೇ ತಮ್ಮ ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಲೇ ಇರುತ್ತಾರೆ. ಜೊತೆಗೆ ಮಕ್ಕಳ ಮೇಲಿನ ತಮ್ಮ ಪ್ರೀತಿ, ಕಾಳಜಿಯನ್ನು ಹೊರ ಹಾಕುತ್ತಲೇ ಇರುತ್ತಾರೆ. ಇದೀಗ ಶಾರುಖ್ ಅವರೊಂದಿಗೆ ದಿಲ್ ವಾಲೇ ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿಸುತ್ತಿರುವ ವರುಣ್, ಶಾರುಖ್ ಒಬ್ಬ ಮಹೋನ್ನತ ತಂದೆ ಎಂದಿದ್ದಾರೆ.
ದಿಲ್ ವಾಲೇ ಶೂಟಿಂಗ್ ವೇಳೆ ಶಾರುಖ್ ಮಗ ಅಬ್ ರಾಮ್ ಜೊತೆ ಸಮಯ ಕಳೆಯುತ್ತಿದ್ದದ್ದನ್ನು ನೋಡಿ ಈ ರೀತಿ ಹೇಳಿದ್ದಾರೆ.  ನನಗೂ ಅಬ್ ರಾಮ್ ಅಂದರೆ ತುಂಬಾ ಇಷ್ಟ. ಬಹುಶಃ ಗೌರಿ ಮೇಡಮ್ ಅಬ್ ರಾಮ್ ಬಗ್ಗೆ ಜಾಸ್ತಿ ಮಾತನಾಡಬೇಡಿ ಎಂದು ಶಾರುಖ್ ಖಾನ್ ಗೆ ಎಚ್ಚರಿಕೆ ನೀಡರಬೇಕು. ಹಾಗಾಗಿ ನಾನು  ಕೂಡ ಅವನ ಬಗ್ಗೆ ಜಾಸ್ತಿ ಮಾತನಾಡೋದಿಲ್ಲ ಎಂದು ವರುಣ್ ಹೇಳಿದ್ದಾರೆ.
 
ಇನ್ನು ಮಕ್ಕಳ ಜೊತೆ ಶಾರುಖ್ ಬೆರೆಯುತ್ತಿರೋ ರೀತಿಗೆ ವರುಣ್ ಫುಲ್ ಖುಷಿಯಾಗಿದ್ದಾರೆ. ಶಾರುಖ್ ಖಾನ್ ಅಂತಹ ಒಬ್ಬ ಒಳ್ಳೆಯ ತಂದೆಯನ್ನು ನಾನೆಂದು ನೋಡಿಲ್ಲ. ನಾನು ಮುಂದೆ ತಂದೆಯಾದಾಗಲೂ ಇದೇ ರೀತಿ ಇರಲು ಬಯಸುತ್ತೇನೆ. ಅವರು ಎಷ್ಟೇ ಬ್ಯುಸಿಯಾಗಿದ್ರೂ ಮಕ್ಕಳಿಗಾಗಿ ಅವರ ಸಮಯವನ್ನು ಹೇಗಾದರೂ ಹೊಂದಿಸಿಕೊಳ್ಳುತ್ತಾರೆ ಎಂದಿದ್ದಾರೆ ವರುಣ್. ಇವತ್ತು ಶಾರುಖ್ ಖಾನ್ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರಿಗೊಂದು ಸ್ಪೆಷಲ್ ಗಿಫ್ಟ್ ನೀಡಲು ನಿರ್ಧರಿಸಿದ್ದಾರೆ ವರುಣ್.

ವೆಬ್ದುನಿಯಾವನ್ನು ಓದಿ