ಶಾರುಖ್ ಖಾನ್ ಪುತ್ರ ಆರ್ಯನ್ ಸಿನಿಮಾಗೆ ಎಂಟ್ರಿ ?!

ಗುರುವಾರ, 2 ಏಪ್ರಿಲ್ 2015 (10:01 IST)
ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಬಣ್ಣ ಹಚ್ಚುವ ಕಾಲ ಸಮೀಪಿಸುತ್ತಿದೆ. ಅಂದರೆ ಆತ  ಸಿನಿಮಾ ರಂಗಕ್ಕೆ ಬರುವ ಸಮಯ ಕೂಡಿ ಬಂದಿದೆ. ಹಾಲಿವುಡ್‌ನಲ್ಲಿ ಸೂಪರ್ ಹಿಟ್ ಆದ ಚಿತ್ರ ಆಸ್ಕರ್ ಅವಾರ್ಡ್ ಪಡೆದ ಸಿನಿಮಾ ಬಾಯ್ ಹುಡ್. ಈ ಚಿತ್ರವನ್ನು ಹಿಂದಿ ಭಾಷೆಗೆ ರೀಮೇಕ್ ಮಾಡಲಾಗುತ್ತಿದ್ದು, ಅದರಲ್ಲಿ ಮಗ ಆರ್ಯನ್ ನಟಿಸುತ್ತಾನೆ ಎನ್ನುವ ಸಂಗತಿಯನ್ನು ಪಪ್ಪಾ ಶಾರುಖ್ ಹೇಳಿದ್ದಾರೆ. ಈ ಮೂಲಕ ಆತನನ್ನು ಜನರ ಮುಂದೆ ಭರ್ಜರಿಯಾಗಿ ತರಲು ನಿಶ್ಚಯ ಮಾಡಿದ್ದಾರೆ ಕಿಂಗ್ ಖಾನ್. 
ಈ ಸಿನಿಮಾ ರೀಮೇಕ್ ಮಾಡಿದರೆ ತಾನು ಅದರಲ್ಲಿ ನಟಿಸುವುದಾಗಿ ಮಗ ಆರ್ಯನ್ ಹೇಳಿದ್ದನಂತೆ. ಲಂಡನ್‌ನಲ್ಲಿ ಆ ಸಿನಿಮಾ ನೋಡಿದ ಆರ್ಯನ್ ಅಪ್ಪನಿಗೆ ಫೋನ್ ಮಾಡಿ ಈ ಚಿತ್ರ ನೋಡು ಎಂದು ಹೇಳಿದನಂತೆ. ಸಾಮಾನ್ಯವಾಗಿ ತಂದೆ ಮಗ ಇಬ್ಬರೂ ಒಳ್ಳೆಯ ಪುಸ್ತಕ ಓದುವ, ಒಳ್ಳೆಯ ಸಿನಿಮಾ ಮಾಹಿತಿ ಕೊಡುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರಂತೆ.
 
ಈ ಬಾಯ್ ಹುಡ್ ಚಿತ್ರವನ್ನು ಒಟ್ಟು ಹನ್ನೆರಡು ವರ್ಷಗಳ ಕಾಲ ಚಿತ್ರೀಕರಣ ಮಾಡಿದ್ದರಂತೆ. ಎಲ್ಲರ ಕಾಲ್ಟ್ರೇನ್ ನಟಿಸಿದ್ದಾರೆ. ಶಾರುಖ್ ಅವರು ಈ ಚಿತ್ರವನ್ನು ರೀಮೇಕ್ ಮಾಡುತ್ತಿರುವ ಈ ಚಿತ್ರದಲ್ಲಿ ಬಾಲ್ಯದ ಸನ್ನಿವೇಶಗಳನ್ನು ಚಿಕ್ಕಮಗ ಅಬಿರಾಂ ಕೈಲಿ ನಟಿಸುವ ಬಗ್ಗೆ ನಿರ್ಣಯ ಕೈಗೊಂಡಿದ್ದಾರಂತೆ. ಈ ಚಿತ್ರ ನಿರ್ಮಾಣದ ಹಕ್ಕು ದೊರೆತ ಬಳಿಕ ನಿರ್ದೇಶಕರನ್ನು ಹುಡುಕುತ್ತಾರಂತೆ. ಆದರೆ ಮಾಹಿತಿ ಒಂದರ ಪ್ರಕಾರ ಈಗಾಗಲೇ ಮನೀಶ್ ಶರ್ಮ ಅವರ ಜೊತೆ ಮಾತನಾಡಿದ್ದಾರಂತೆ. ಈತ ಶಾರುಖ್ ಖಾನ್ ಫ್ಯಾನ್ ಚಿತ್ರದ ನಿರ್ದೇಶಕರಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ