ಕಾಂತಾರ ನೋಡಿ ತವರು ನೆನೆಸಿಕೊಂಡ ಶಿಲ್ಪಾ ಶೆಟ್ಟಿ
ಶಿಲ್ಪಾ ಮೂಲತಃ ಮಂಗಳೂರಿನವರು. ವರ್ಷಕ್ಕೊಮ್ಮೆಯಾದರೂ ಊರಿಗೆ ಬಂದು ಈಗಲೂ ಇಲ್ಲಿನ ದೇವ, ದೈವಗಳಿಗೆ ಪೂಜೆ ಸಲ್ಲಿಸುತ್ತಾರೆ. ಇದೀಗ ಕಾಂತಾರ ಸಿನಿಮಾ ನೋಡಿದಾಗ ಊರಿನ ನೆನಪಾಯಿತು ಎಂದಿದ್ದಾರೆ ಶಿಲ್ಪಾ. ಇದೊಂದು ಅದ್ಭುತ ಸಿನಿಮಾ. ಕ್ಲೈಮ್ಯಾಕ್ಸ್ ನೋಡುತ್ತಿದ್ದರೆ ಮೈ ಜುಮ್ಮೆಂದಿತು ಎಂದು ಹೊಗಳಿದ್ದಾರೆ ಶಿಲ್ಪಾ ಶೆಟ್ಟಿ.