ಸೆಂಚುರಿ ಬಾರಿಸಿದ ಸ್ಯಾಂಡಲ್‌ವುಡ್ ಸ್ಟಾರ್ ಶಿವಣ್ಣ?!

ಗುರುವಾರ, 26 ಮಾರ್ಚ್ 2015 (09:58 IST)
ಕಳೆದ ವಾರ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಒಂದಲ್ಲ ಎರಡು ಚಿತ್ರಗಳ ಶೂಟಿಂಗ್  ಗೆಂದು ವಿದೇಶಕ್ಕೆ ಹೋದರು ಸಾಮಾನ್ಯವಾಗಿ ಯಾರೇ ಆಗಲಿ ಒಂದು ಚಿತ್ರದ ಶೂಟಿಂಗ್ ಗೆ ಹೋಗುವ ಬಗ್ಗೆ ಆಸಕ್ತಿ ತೋರುತ್ತಾರೆ, ಶಿವಣ್ಣ ಎರಡು ಚಿತ್ರವನ್ನು ಸಹಿತ ಜೊತೆಗೆ ಕೊಂಡೊಯ್ದು ಆ ಮೂಲಕ ಚಿತ್ರತಂಡಗಳ ಸಮಯ ಮತ್ತು ಹಣ ಉಳಿಸಿದ್ದಾರೆ.
ಶಿವರಾಜ್ ಕುಮಾರ್ ಅವರು ತಮ್ಮ ಜೊತೆಗೆ ಹರ್ಷ ಅವರ ವಜ್ರಕಾಯ ಚಿತ್ರತಂಡ ಮತ್ತು ಸುರೇಶ ಅವರ ನಿರ್ಮಾಣ ಶಿವಲಿಂಗ ಚಿತ್ರ ತಂಡವನ್ನು ಕರೆದೊಯ್ದಿದ್ದಾರೆ ಯೂರೋಪ್ ದೇಶಗಳಿಗೆ. ಇಟಲಿ  ಆರಾಮವಾಗಿ ತಲುಪಿದ ಚಿತ್ರತಂಡಗಳಿಗೆ ಈ ಮೂಲಕ ತಮ್ಮ ಸಹಾಯ ಹಸ್ತ ತೋರಿದ್ದಾರೆ ಶಿವಣ್ಣ. ಈ ಎರಡು ಚಿತ್ರಗಳು ಒಂದಾದ ಬಳಿಕ ಮತ್ತೊಂದು ಚಿತ್ರೀಕರಣ ಮಾಡುವುದಾಗಿ ಒಪ್ಪಂದವಾಗಿದೆ. 
 
ಒಟ್ಟಾರೆ ಇಂತಹ ಸಹಕಾರ ಮನೋಭಾವ ಎಲ್ಲ ನಟರಲ್ಲೂ ಬಂದರೆ ನಿರ್ಮಾಪಕ ತನ್ನ ಜೇಬಿಂದ ಸುಖಾಸುಮ್ಮನೆ ಹಣ ಪೋಲಾಗುವುದನ್ನು ತಡೆಯ ಬಹುದಾಗಿದೆ. ವಿಶೇಷ ಅಂದ್ರೆ ಎಲ್ಲರು ಶಿವಣ್ಣ ಅಲ್ಲವಲ್ಲ! 

ವೆಬ್ದುನಿಯಾವನ್ನು ಓದಿ