ಸೆನ್ಸಾರ್ ಪಾಸ್ ಆದ ಆಯುಷ್ಮಾನ್ ಭವ: ರಿಲೀಸ್ ಡೇಟ್ ಫಿಕ್ಸ್

ಶುಕ್ರವಾರ, 8 ನವೆಂಬರ್ 2019 (09:28 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಸಿನಿಮಾ ರಿಲೀಸ್ ಡೇಟ್ ನ್ನು ಕೊನೆಗೂ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.


ಈ ಸಿನಿಮಾ ನವಂಬರ್ 1 ಕ್ಕೆ ರಿಲೀಸ್ ಆಗುವುದು ಎಂದು ಈ ಮೊದಲು ಸುದ್ದಿ ಹಬ್ಬಿತ್ತು. ಆದರೆ ಕೊನೆಯ ಕ್ಷಣದಲ್ಲಿ ಚಿತ್ರತಂಡ ಅಲ್ಲಗಳೆದಿತ್ತು. ಇದೀಗ ನವಂಬರ್ 15 ಕ್ಕೆ ಸಿನಿಮಾ ರಿಲೀಸ್ ಆಗುವುದು ಪಕ್ಕಾ ಎಂದು ಚಿತ್ರತಂಡ ಘೋಷಿಸಿದೆ.

ಸೆನ್ಸಾರ್ ಮಂಡಳಿ ಸಿನಿಮಾ ಪಾಸ್ ಮಾಡಿದ್ದು, ಯು/ಎ ಸರ್ಟಿಫಿಕೇಟ್ ನೀಡಿದೆ. ದ್ವಾರಕೀಶ್ ನಿರ್ಮಾಣ ಸಂಸ್ಥೆಯ ಸಿನಿಮಾ ಇದಾಗಿದ್ದು, ಶಿವಣ್ಣನ ಜತೆಗೆ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ