ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ತಂಡ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದನ್ನು ಕೊಟ್ಟಿದೆ.
ಭಜರಂಗಿ ಸಿನಿಮಾ ಇದೇ ಗಣೇಶ ಹಬ್ಬದ ಸಂದರ್ಭದಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ ಈಗ ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅನುಮತಿ ನೀಡದೇ ಇರುವ ಕಾರಣಕ್ಕೆ ರಿಲೀಸ್ ಮುಂದೂಡಿಕೆಯಾದರೂ ಅಚ್ಚರಿಯಿಲ್ಲ.
ಈ ನಡುವೆ ಆಗಸ್ಟ್ 20 ರಂದು ಅಂದರೆ ಇದೇ ಶುಕ್ರವಾರ ಚಿತ್ರತಂಡ ಹಾಡೊಂದನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಶುಕ್ರವಾರ ಬೆಳಿಗ್ಗೆ 10.05 ಕ್ಕೆ ಹಾಡೊಂದರ ಲಿರಿಕಲ್ ವಿಡಿಯೋ ಲಾಂಚ್ ಮಾಡಲಿದೆ. ಎ. ಹರ್ಷ ನಿರ್ದೇಶನದ ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿದೆ.