ಶಿವರಾಜ್ ಕುಮಾರ್ 125 ನೇ ಚಿತ್ರ ಅನೌನ್ಸ್

ಗುರುವಾರ, 11 ಮಾರ್ಚ್ 2021 (09:52 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ 125 ನೇ ಚಿತ್ರ ಅನೌನ್ಸ್ ಆಗಿದೆ. ಈ ಸಿನಿಮಾ ಅವರ ಸಿನಿ ಕೆರಿಯರ್ ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವುದು ಪಕ್ಕಾ.


ಶಿವಣ್ಣನ 125 ನೇ ಸಿನಿಮಾಗೆ ‘ವೇದ’ ಎಂದು ಟೈಟಲ್ ಇಡಲಾಗಿದ್ದು, ಮೊದಲ ಪೋಸ್ಟರ್ ಇಂದು ಶಿವರಾತ್ರಿ ಹಬ್ಬದ ದಿನ ಬಿಡುಗಡೆಯಾಗಿದೆ. ಮೀಸೆ, ದಾಡಿ ಬಿಟ್ಟುಕೊಂಡು ಶಿವಣ್ಣ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾ ಮೂಲಕ ಮತ್ತೆ ಎ ಹರ್ಷ-ಶಿವಣ್ಣ ಜೊತೆಯಾಗುತ್ತಿದ್ದಾರೆ. ವೇದ ಸಿನಿಮಾವನ್ನು ಗೀತಾ ಶಿವರಾಜ್ ಕುಮಾರ್ ಗೀತಾ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಿಸುತ್ತಿದ್ದು, ಹರ್ಷ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ 1960 ರ ಕಾಲದ ಕತೆಯನ್ನು ಒಳಗೊಂಡಿದೆಯಂತೆ. ಅರ್ಜುನ್ ಜನ್ಯಾ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ