ನಟ ಸಿದ್ಧಾರ್ಥ್ ಗೆ ಕ್ಷಮೆ ಯಾಚಿಸಿದ ಶಿವರಾಜ್ ಕುಮಾರ್

ಶುಕ್ರವಾರ, 29 ಸೆಪ್ಟಂಬರ್ 2023 (17:15 IST)
Photo Courtesy: Twitter
ಬೆಂಗಳೂರು: ಕಾವೇರಿ ವಿವಾದದ ನಡುವೆ ಬೆಂಗಳೂರಿನಲ್ಲಿ ತಮ್ಮ ತಮಿಳು ಸಿನಿಮಾ ಚಿಕ್ಕು ಪ್ರಚಾರಕ್ಕೆ ಬಂದಿದ್ದ ನಟ ಸಿದ್ಧಾರ್ಥ್ ರನ್ನು ನಿನ್ನೆ ಕನ್ನಡ ಪರ ಸಂಘಟನೆಗಳು ತಡೆದು ಕಾರ್ಯಕ್ರಮ ಸ್ಥಗಿತಗೊಳಿಸಿದ್ದರು.

ಈ ಘಟನೆ ಬಗ್ಗೆ ಇಂದು ಕಾವೇರಿಗಾಗಿ ನಡೆದ ಪ್ರತಿಭಟನಾ ಸಭೆಯಲ್ಲಿ ನಟ ಶಿವರಾಜ್ ಕುಮಾರ್ ಖಂಡಿಸಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ಪರವಾಗಿ ಸಿದ್ಧಾರ್ಥ್ ಗೆ ಕ್ಷಮೆ ಕೋರಿದ್ದಾರೆ.

‘ಪರಭಾಷೆಯ ಹೀರೋನ ಪತ್ರಿಕಾಗೋಷ್ಠಿ ನಿಲ್ಲಿಸಲಾಯಿತು. ಅದು ತಪ್ಪಲ್ವ? ಸುಮ್ಮನೆ ಕೂತು ಹೋರಾಟ ಮಾಡಿದ್ರೆ ಪರಿಹಾರ ಸಿಗಲ್ಲ. ಸರ್ಕಾರಗಳು ಕುಂತು ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು. ಅದು ಬಿಟ್ಟು ಪರಿಸ್ಥಿತಿ ನೋಡಿ ಲಾಭ ಪಡೆಯಬಾರದು. ಇದು ಹೋರಾಟಕ್ಕೆ ಮರ್ಯಾದೆ ಅಲ್ಲ. ಬೇರೆಯವರಿಗೆ ನೋವು ಕೊಡುವ ಕೆಲಸ ಮಾಡಬಾರದು. ಸಿದ್ಧಾರ್ಥ್ ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದ್ದು ಸರಿಯಲ್ಲ. ನಮ್ಮ ಇಂಡಸ್ಟ್ರಿ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ಇನ್ನು ಈ ರೀತಿ ಆಗಲ್ಲ ಎಂದು ಭರವಸೆ ಕೊಡುತ್ತೇನೆ’ ಎಂದು ಶಿವಣ್ಣ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ