ನಟ ಸಿದ್ಧಾರ್ಥ್ ತಮಿಳು ಸಿನಿಮಾ ಪ್ರಚಾರಕ್ಕೆ ಅಡ್ಡಪಡಿಸಿದ ಕರವೇ ಕಾರ್ಯಕರ್ತರು
ಸಿದ್ಧಾರ್ಥ್ ನಾಯಕರಾಗಿರುವ ಚಿಕ್ಕು ಸಿನಿಮಾ ತಮಿಳು, ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ಸಿದ್ಧಾರ್ಥ್ ಬೆಂಗಳೂರಿಗೆ ಬಂದು ಮಲ್ಲೇಶ್ವರದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದರು.
ಈ ವೇಳೆ ವೇದಿಕೆಗೆ ನುಗ್ಗಿದ ಕರವೇ ಕಾರ್ಯಕರ್ತರು ಇಂತಹ ಸೂಕ್ಷ್ಮ ಸಮಯದಲ್ಲಿ ತಮಿಳು ಸಿನಿಮಾ ಪ್ರಚಾರ ಮಾಡಬೇಡಿ. ನಿಮ್ಮ ಸಿನಿಮಾ ಪ್ರಚಾರ ಈ ಸಮಯದಲ್ಲಿ ಬೇಡ. ದಯವಿಟ್ಟು ಇಲ್ಲಿಂದ ತೆರಳಿ ಎಂದು ಮನವಿ ಮಾಡಿದರು. ಕರವೇ ಕಾರ್ಯಕರ್ತರ ಮನವಿಗೆ ಮಣಿದ ಸಿದ್ಧಾರ್ಥ್ ಕೂಡಲೇ ಎದ್ದು ನಿಂತು ಕೈಮುಗಿದು ನನ್ನ ಸಿನಿಮಾ ನೋಡಿ ಎಂದು ಮನವಿ ಮಾಡಿ ಸ್ಥಳದಿಂದ ತೆರಳಿದ್ದಾರೆ.