ಬೆಂಗಳೂರು: ರಾಜ್ ಕುಮಾರ ಎಂದಾಕ್ಷಣ ಸಾಮಾನ್ಯ ಜನರಿಗೇ ಒಂದು ಕ್ಷಣ ಅಭಿಮಾನವುಕ್ಕಿ ಬರುತ್ತದೆ. ಹಾಗಿದ್ದ ಮೇಲೆ ಅವರ ಪುತ್ರ ಶಿವರಾಜ್ ಕುಮಾರ್ ಗೆ ಹೇಗಾಗಬೇಡ? ಅಪ್ಪನ ಹೆಸರಿನ ತಮ್ಮ ಪುನೀತ್ ಸಿನಿಮಾ ನೋಡಿ ಹೊರ ಬಂದ ಮೇಲೆ ಶಿವಣ್ಣ ಭಾವುಕರಾದರು.
ಪತ್ನಿ ಗೀತಾ ಜತೆ ಸಿನಿಮಾ ನೋಡಿದ ಶಿವಣ್ಣ ಹೊರಬರುತ್ತಿದ್ದಂತೆ ಮಾಧ್ಯಮಗಳು ಅವರನ್ನು ಮುತ್ತಿಕೊಂಡಿತು. ಈ ಸಂದರ್ಭದಲ್ಲಿ ಅವರು ಮಾತನಾಡುವಾಗ ಗದ್ಗದಿತರಾದರು. ಕಣ್ಣಂಚಿನಲ್ಲಿ ನೀರು ಹರಿದಿತ್ತು.
ಸಿನಿಮಾದಲ್ಲಿ ಬರುವ ರಾಜ್ ಕುಮಾರ್ ಅವರ ಕೆಲವು ಆದರ್ಶಗಳು, ಫೋಟೋಗಳನ್ನು ನೋಡಿ ಶಿವಣ್ಣನಿಗೆ ಅಪ್ಪನ ನೆನಪಾಗಿ ದುಃಖ ತಡೆಯಲಾಗಲಿಲ್ಲ. ಹೀಗಾಗಿ ಅತ್ತು ಬಿಟ್ಟರು. ಇಷ್ಟು ಒಳ್ಳೆ ಚಿತ್ರ ಮಾಡಿದ ತಮ್ಮ ಪುನೀತ್ ಹಾಗೂ ಚಿತ್ರತಂಡಕ್ಕೆ ಅವರು ಧನ್ಯವಾದ ಹೇಳುವುದನ್ನು ಮರೆಯಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ