ಹೊಸ ಹೇರ್ ಸ್ಟೈಲ್ ಮಿಂಚುತ್ತಿರುವ ಶಿವರಾಜ್ ಕುಮಾರ್

ಭಾನುವಾರ, 6 ಅಕ್ಟೋಬರ್ 2019 (05:40 IST)
ಬೆಂಗಳೂರು: ಆಯುಷ್ಮಾನ್ ಭವ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಇದೀಗ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಫೋಟೋವೊಂದು ಪ್ರಕಟಿಸಿದ್ದು ವೈರಲ್ ಆಗಿದೆ.


ಈ ಫೋಟೋದಲ್ಲಿ ಶಿವಣ್ಣ ತಮ್ಮ ಹೊಸ ಹೇರ್ ಸ್ಟೈಲ್ ಪರಿಚಯಿಸಿದ್ದಾರೆ. ಎಷ್ಟೇ ವಯಸ್ಸಾದರೂ ಯುವ ನಟರನ್ನೂ ನಾಚಿಸುವಂತೆ ಈಗಲೂ ತಮ್ಮ ಸ್ಟೈಲ್, ಲವ ಲವಿಕೆ ಉಳಿಸಿಕೊಂಡಿರುವ ಶಿವಣ್ಣ ಹೊಸ ಹೇರ್ ಸ್ಟೈಲ್ ಅಭಿಮಾನಿಗಳಿಗೆ ಇಷ್ಟವಾಗಿದೆ.

ಆಯುಷ್ಮಾನ್ ಭವ ಸಿನಿಮಾದಲ್ಲೂ ಶಿವಣ್ಣ ಒಂದು ರೀತಿಯಲ್ಲಿ ಇದೇ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದರು. ಈಗ ಚಿತ್ರಬಿಡುಗಡೆಗೆ ಮೊದಲು ಅದೇ ಹೇರ್ ಸ್ಟೈಲ್ ಪ್ರದರ್ಶಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ