ರಾಜ್ಯೋತ್ಸವಕ್ಕೆ ಬರಲಿದೆ ಶಿವರಾಜ್ ಕುಮಾರ್ ‘ಆಯುಷ್ಮಾನ್ ಭವ’

ಸೋಮವಾರ, 23 ಸೆಪ್ಟಂಬರ್ 2019 (09:01 IST)
ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಸಿನಿಮಾ ರಿಲೀಸ್ ದಿನಾಂಕ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ.


ನವಂಬರ್ 1 ರಿಂದ  ಅಂದರೆ ರಾಜ್ಯೋತ್ಸವಕ್ಕೆ ಆಯುಷ್ಮಾನ್ ಭವ ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಶಿವರಾಜ್ ಕುಮಾರ್ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಮುಗಿದಿವೆ.

ಚಿತ್ರದ ಪೋಸ್ಟರ್ ಗಳು ಈಗಾಗಲೇ ಬಿಡುಗಡೆಯಾಗಿದ್ದು, ಶಿವರಾಜ್ ಕುಮಾರ್ ಜತೆಗೆ ಹಿರಿಯ ನಟ ಅನಂತ್ ನಾಗ್ ಇರುವ ಪೋಸ್ಟರ್ ಕುತೂಹಲ ಕೆರಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ